ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ) ವಲಯ ಸಮಿತಿ, ಕಾಪು ಇದರ ರಜತ ಸಂಭ್ರಮ ಎ.19, ಭಾನುವಾರ ಮಹಾದೇವಿ ಪ್ರೌಢಶಾಲೆ, ಕಾಪು ಇಲ್ಲಿ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 9 ಕ್ಕೆ ಕ್ರೀಡಾಕೂಟವು ಜರಗಲಿದ್ದು, ಕಾಪು ವಲಯದ ಮಾಜಿ ಅಧ್ಯಕ್ಷರಾದ ಮೋಹಿನಿ ಸುವರ್ಣ ಹಾಗೂ ಸುರೇಖಾ ಶೈಲೇಶ್ ಉದ್ಘಾಟಿಸಲಿದ್ದಾರೆ.
ಅಪರಾಹ್ನ ಗಂಟೆ 3:30ಕ್ಕೆ ಜರಗಲಿರುವ
ಸಭಾ ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಲಿದ್ದಾರೆ. ಕೆ.ಎಸ್.ಟಿ.ಎ ರಾಜ್ಯ ಸಮಿತಿ ಮಂಗಳೂರು ರಾಜ್ಯಾಧ್ಯಕ್ಷರಾದ
ಸುರೇಶ್ ಸಾಲ್ಯಾನ್ ಗೌರವ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ
ಕೆ.ಎಸ್.ಟಿ.ಎ ರಾಜ್ಯ ಸಮಿತಿ ಮಂಗಳೂರು
ಉಪಾಧ್ಯಕ್ಷರಾದ ರಾಮಚಂದ್ರ, ಕೋಶಾಧಿಕಾರಿ ಅಬ್ದುಲ್ ಖಾದರ್, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಕಾಪು ಅಧ್ಯಕ್ಷರಾದ ದಯಾನಂದ ಕೋಟ್ಯಾನ್, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಉಡುಪಿ ಪ್ರ.ಕಾರ್ಯದರ್ಶಿ ಬಿ. ಕೆ ಶ್ರೀನಿವಾಸ್, ಕೆ.ಎಸ್.ಟಿ.ಎ ವಲಯ ಸಮಿತಿ ಕಾಪು ವಲಯದ ಪ್ರ. ಕಾರ್ಯದರ್ಶಿ ರಮಣಿ ಎಸ್. ಆಚಾರ್ಯ, ಕೆ.ಎಸ್.ಟಿ.ಎ ಕ್ಷೇತ್ರ ಸಮಿತಿ ಕಾಪು ಅಧ್ಯಕ್ಷರಾದ ಮೋಹಿನಿ ಕುಂದರ್, ಕೆ.ಎಸ್.ಟಿ.ಎ ವಲಯ ಸಮಿತಿ ಬೆಳ್ಮಣ್ಣು ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಕೆ.ಎಸ್.ಟಿ.ಎ ವಲಯ ಸಮಿತಿ ಕಟಪಾಡಿ ಅಧ್ಯಕ್ಷರಾದ ಹೇಮಲತಾ ಹೆಗ್ಡೆ, ಕೆ.ಎಸ್.ಟಿ.ಎ ವಲಯ ಸಮಿತಿ ಪಡುಬಿದ್ರಿ ಅಧ್ಯಕ್ಷರಾದ ಪುಷ್ಪಲತಾ, ಶ್ರೀ ಹೊಸಮಾರಿಗುಡಿ ದೇವಸ್ಥಾನ ಕಾಪು ಆಡಳಿತ ಸಮಿತಿ ಸದಸ್ಯರಾದ ಮಾಧವ ಪಾಲನ್, ಲಕ್ಷ್ಮೀಜನಾರ್ದನ ಟೆಕ್ಸ್‌ಟೈಲ್ಸ್, ಕಾಪು ಇದರ ಲಕ್ಷ್ಮೀನಾರಾಯಣ ತಂತ್ರಿ ಉಪಸ್ಥಿತರಿರಲಿದ್ದಾರೆ.
ಕೆ.ಎಸ್.ಟಿ.ಎ ವಲಯ ಸಮಿತಿ ಕಾಪು ಅಧ್ಯಕ್ಷರಾದ ಸುಧಾಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಟೈಲರ್ ವೃತ್ತಿ ಬಾಂಧವರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ವರಂ ಮೆಲೋಡಿಸ್, ಕಾಪು ಇವರಿಂದ ಸಂಗೀತ ರಸಮಂಜರಿ ನಂತರ ಲಕ್ಕಿಡಿಪ್ ಡ್ರಾ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜರಗಲಿದೆ ಎಂದು ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೆ.ಎಸ್.ಟಿ.ಎ. ವಲಯ ಸಮಿತಿ ಕಾಪು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
