ಮುದರಂಗಡಿ : ಲಯನ್ಸ್ ಮತ್ತು ಲಿಯೋ ಕ್ಲಬ್ ಮುದರಂಗಡಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಜಿಲ್ಲೆ 317 C ಯ ಪ್ರಥಮ ಉಪ ಜಿಲ್ಲಾ ಗವರ್ನರ್ PMJF ಲಯನ್ ಹರಿಪ್ರಸಾದ್ ರೈ ಪದಗ್ರಹಣ ನೆರವೇರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲ. ಅಂತೋನಿ ವಿನ್ಸೆಂಟ್ ಡಿಸೋಜ ದುರ್ಗದಕಟ್ಟೆ, ಕಾರ್ಯದರ್ಶಿಯಾಗಿ ಲ.ಲಾರೆನ್ಸ್ ಡಿಸೋಜ, ಖಜಾಂಚಿಯಾಗಿ ಲ.ಫೆಲಿಕ್ಸ್ ಡಿಸೋಜ ಹಾಗೂ ಲಿಯೋ ಕ್ಲಬ್ ಅಧ್ಯಕ್ಷರಾಗಿ ಲಿಯೋ. ರಿಯಾನ್ ಶಾನ್ ಕೋರ್ಡಾ, ಕಾರ್ಯದರ್ಶಿಯಾಗಿ ಲಿ.ಅನ್ವೇಶ್ ಡಿಸೋಜ, ಖಜಾಂಚಿಯಾಗಿ ಲಿ.ಅಡ್ರೀನಾ ಮೆಂಡೋನ್ಸಾ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಪ್ರಾಂತ್ಯಾದಕ್ಷಾರದ
MJF ಲಯನ್ ಗುರು ಪ್ರಸಾದ್ ಶೆಟ್ಟಿ ಯವರು ನೂತನ ಸದಸ್ಯರ ಸೇರ್ಪಡೆ ನಡೆಸಿದರು.
ನೂತನ ಸದಸ್ಯರಾಗಿ ಲ.ಆನಂದ್ ಡಿಸೋಜ, ಲ.ಉಮೇಶ್ ಮೂಲ್ಯ, ಮತ್ತು ಲ.ವೀರಾ ಕಾರ್ಡೊಜ ರವರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸ್ಥಳಿಯ ಸರಕಾರಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ಹಾಗೂ ದ್ವಿತೀಯಾ ಪಿ ಯು ಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಬಿ.ಕಾಮ್ ನಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿನಿ ಓರ್ವಳನ್ನು ಒಳಗೊಂಡು ಒಟ್ಟು ಹತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು.
ಸಮಾರಂಭದಲ್ಲಿ ಪ್ರಾಂತ್ಯಾಧ್ಯಕ್ಷರಾದ ಲ. ಥಾಮಸ್ ಲೂಕೋಸ್, ವಲಯಾದಕ್ಷರಾದ ಲ. ಡಾ. ಮನೋಜ್ ಕುಮಾರ್ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ದಿನೇಶ್ ಕುಮಾರ್ ಹಾಗೂ ಮುದರಂಗಡಿ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರುಗಳು ವಂ. ಫಾ. ವಿನ್ಸೆಂಟ್ ಕೊಯೆಲ್ಹೊ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಕ್ಲಬ್‌ನ ಮುಂದಿನ ಸೇವಾ ಚಟುವಟಿಕೆಗಳಿಗೆ ಶುಭಕೋರಿದರು.
ನಿರ್ಗಮಿತ ಅಧ್ಯಕ್ಷ ಲ. ರಿಯಾಜ್ ನಜೀರ್ ಸಾಹೇಬ್, ಕಾರ್ಯದರ್ಶಿ ಲ. ಶರೀನ್ ಸ್ಟೆಲ್ಮಾ ಕ್ರಾಸ್ತಾ, ಖಜಾಂಚಿ ಲ. ಲಾರೆನ್ಸ್ ಡಿಸೋಜ, ಲಿಯೋ ಅಧ್ಯಕ್ಷೆ ಲಿಯೋ ಕೈರಾ ಶೈನಾ ಡಿಸೋಜ, ಕಾರ್ಯದರ್ಶಿ ಲಿ. ರಿಯಾ ಕೋರ್ಡಾ ಹಾಗೂ ಖಜಾಂಚಿ ಲಿ. ಅಯ್ಶಲ್ ಮರಿಯಾ ಮಥಾಯಸ್ ಸೇರಿದಂತೆ ಲಯನ್ಸ್ ಮತ್ತು ಲಿಯೋ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
