ಪಡುಬಿದ್ರಿ ಪುರದೊಡೆಯ ಹಾಗೂ ಪಡ್ಡೆದ್ರ ಉಲ್ಲಾಯೆ ವೀಡಿಯೋ ಆಲ್ಬಮ್ ಸಾಂಗ್ಸ್ ಪೋಸ್ಟರ್ ಬಿಡುಗಡೆ
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿ ಬಿಡುಗಡೆಗೊಳ್ಳಲಿರುವ ಪಡುಬಿದ್ರಿ ಪುರಾದೊಡೆಯ ಕನ್ನಡ ಹಾಗೂ ಪಡ್ಡೆದ್ರ ಉಲ್ಲಾಯೆ ತುಳು ವೀಡಿಯೋ ಆಲ್ಬಮ್ ಸಾಂಗ್ಸ್ ನ ಪೋಸ್ಟರನ್ನು ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಸುರೇಶ್ ಪಡುಬಿದ್ರಿ, ನಿರ್ಮಾಪಕಿ ಶಾಲಿನಿ ಸುರೇಶ್, ನಿರ್ದೇಶಕರಾದ ಸಂತೋಷ್ ಪಡುಬಿದ್ರಿ, ದಿನೇಶ್ ಪಡುಬಿದ್ರಿ, ಯಶೋಧ ಪಡುಬಿದ್ರಿ, ರಚನ್ ಸಾಲ್ಯಾನ್, ಸಾಹಿಲ್ ಪಡುಬಿದ್ರಿ, ಅಶ್ವಥ್ ಅಚಾರ್ಯ ಪಾದೆಬೆಟ್ಟು, ರಮೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
