ಎ.26 : ಗ್ರೀನ್ ವುಡ್ ರೆಸಾಟ್೯ ಮಜೂರು ಇವರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆರೋಗ್ಯ ಶಿಬಿರ
Thumbnail

ಕಾಪು : ಗ್ರೀನ್ ವುಡ್ ರೆಸಾಟ್೯ ಮಜೂರು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್‌ (ರಿ) ಕಾಪು ತಾಲೂಕು ಇವರ ಸಹಯೋಗದೊಂದಿಗೆ ಜುಲೇಖ ಯೆನೆಪೋಯ ಇಸ್ಟಿಟ್ಯೂಟ್ ಆಫ್ ಓಂಕಲಜ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ, ದೇರಳಕಟ್ಟೆ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ವತಿಯಿಂದ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಎ. 26, ಭಾನುವಾರ ಗ್ರೀನ್ ವುಡ್ ಆರ್ ಕೆ ಹೋಮ್ ಸ್ಟೇ ಇಲ್ಲಿ ಜರಗಲಿದೆ.

ಶಿಬಿರದಲ್ಲಿ ಮಹಿಳಾ ಯೋಗಕ್ಷೇಮ ಪರೀಕ್ಷೆ, 
ಕಣ್ಣಿನ ವಿಭಾಗ (ಅಗತ್ಯವಿದ್ದವರಿಗೆ ಉಚಿತ ಕನ್ನಡಕ ನೀಡಲಾಗುವುದು), ಸಾಮಾನ್ಯ ವೈದ್ಯಕೀಯ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಚರ್ಮ ರೋಗ ವಿಭಾಗ, ರಕ್ತದೊತ್ತಡ ಮತ್ತು ಮಧು ಮೇಹ ತಪಾಸಣೆ, 
ದಂತ ವೈದ್ಯಕೀಯ ವಿಭಾಗದ ಸೇವೆ ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಶಿಬಿರದ ಆಯೋಜಕರಾದ ದೀಪಕ್ ಕುಮಾರ್ ಎರ್ಮಾಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

25 Apr 2026, 01:25 PM
Category: Kaup
Tags: