ಕಳತ್ತೂರು : ಪಿ.ಕೆಎಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ.
ಕಾಪು : ಕಳತ್ತೂರು ಪಿ. ಕೆ. ಎಸ್ ಪ್ರೌಢಶಾಲೆಗೆ 2025-26 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿರುತ್ತಾರೆ.
ಸಾಧನೆಗೈದ ಹೆಮ್ಮೆಯ ವಿದ್ಯಾರ್ಥಿಗಳು :
ಕೆ, ಮೊಹಮ್ಮದ್ ಶಾಯಿಲ್ (589), ತೇಜಸ್ (581),ಬಸವರಾಜ (525),ಸಾತ್ವಿಕ (507),ವರ್ಷಿಣಿ (491), ಮೊಹಮ್ಮದ್ ರಯಾನ್ (480),ಆಕಾಶ್ (478),ಸಾರ್ಥಕ್ (471)ಸ್ವಸ್ತಿಕ್ (444),ಮೆಹೆಕ್ ಫಾತಿಮಾ (437).
ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಸಂಸ್ಥೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಸಂಘ ಅಭಿನಂದಿಸಿರುತ್ತಾರೆ.
