ಕಾಪು : ಇನ್ನಂಜೆ ಎಸ್. ವಿ. ಎಚ್ ಶಾಲೆಗೆ ಉಚಿತ ಶಿಕ್ಷಣಕ್ಕಾಗಿ ರೂ.1,67,875 ಧನ ಸಹಾಯ
Thumbnail

ಕಾಪು : ಇನ್ನಂಜೆ ಎಸ್. ವಿ. ಎಚ್ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಇನ್ನಂಜೆಯ ತಂಡವು ರೂ.1,67,875 ಸಹಾಯ ಧನದ ಚೆಕ್ ನ್ನು ಶಾಲಾ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.

ಉಚಿತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಆಯೋಜನೆಗೊಂಡ ಇನ್ನಂಜೆ ಪ್ರೀಮಿಯರ್ ಲೀಗ್ ಏಪ್ರಿಲ್ 25, 26 ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು.

ಈ ಸಂದರ್ಭ ಎಸ್.ವಿ.ಎಚ್ ಸಂಸ್ಥೆಯ ಉಪನ್ಯಾಸಕರು, ಇನ್ನಂಜೆ ತಂಡದ ಪ್ರಮುಖರು ಉಪಸ್ಥಿತರಿದ್ದರು.

07 May 2026, 09:01 AM
Category: Kaup
Tags: