ಕುತ್ಯಾರು ಪಡುಮನೆ ಕುಟುಂಬಸ್ಥರಿಂದ ಹರಕೆಯ ಮಾರಿಪೂಜೆ ಸೇವೆ
ಕಾಪು : ಕುತ್ಯಾರು ಪಡುಮನೆ ಕುಟುಂಬಸ್ಥರಿಂದ ಮೇ 12 ಮತ್ತು 13ರಂದು ಕಾಪು ಕಲ್ಯ ಮೂರನೇ ಮಾರಿಗುಡಿ ಶ್ರೀ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಹರಕೆಯ ಮಾರಿಪೂಜೆ ಸೇವೆ ನಡೆಯಲಿದೆ.
ಅ ಪ್ರಯುಕ್ತ ಅದೇ ದಿನ ಸಂಜೆ 4.30 ಕ್ಕೆ ಸರಿಯಾಗಿ ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದಿಂದ ಹೂ ಹಿಂಗಾರ ಮೆರವಣಿಗೆ, ರಾತ್ರಿ ಶ್ರೀ ದೇವಿಯ ಸನ್ನಿದಿಗೆ ರಥದಲ್ಲಿ ಮಾರಿಯಮ್ಮನ ಆಗಮನ, ಅರಮನೆ ಪೂಜೆ, ನರ್ತನ ಸೇವೆ, ಜೊತೆಗೆ ಅನ್ನಸಂತರ್ಪಣೆ ಹಾಗೂ ಮರುದಿನ ಮೇ 13 ರ ಸಂಜೆ ಶ್ರೀ ದೇವಿಯ ನರ್ತನ ಸೇವೆಯಲ್ಲಿ ಭಾಗಿಯಾಗಿ ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಕುತ್ಯಾರು ಪಡುಮನೆ ಕುಟುಂಬಸ್ಥರ ಪರವಾಗಿ ಕಲ್ಯಾಣಿ ಮೂಲ್ಯ ಹಾಗೂ ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
