ಮೇ 12 - 13 : ಕೋಟೆ ಶ್ರೀ ಗಡು ಮಾರಿಯಮ್ಮ, ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು ರಾಣಿಕೇರಿಯಲ್ಲಿ ಕಾಲಾವಧಿ ರಾಶಿ ಮಾರಿಪೂಜೆ
Thumbnail

ಕಾಪು : ಇಲ್ಲಿನ ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು ರಾಣಿಕೇರಿಯಲ್ಲಿ ಮೇ12 ಮತ್ತು 13 ರಂದು ಕಾಲಾವಧಿ ರಾಶಿ ಮಾರಿಪೂಜೆ ಜರಗಲಿದೆ.

ಮೇ 12, ಮಂಗಳವಾರ ರಾತ್ರಿ ಗಂಟೆ 7:30 ಕ್ಕೆ ಶ್ರೀ ಮಾರಿಯಮ್ಮಕುಣಿತ ಭಜನಾ ಮಂಡಳಿ, ಮಲ್ಲಾರ್ ಇವರಿಂದ ಕುಣಿತ ಭಜನೆ, ಸಾಕ್ಷಿ ಕಲಾವಿದೆರ್ ಬೆಳಪು ಇವರಿಂದ ಕಾಮಿಡಿ 20-20 ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 12ಕ್ಕೆ
ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ
ಹಾಗೂ ರಾಶಿ ಪೂಜಾ ಮಹೋತ್ಸವ ಜರಗಲಿದೆ.

ಮೇ13 ರಂದು, ಬುಧವಾರ ಬೆಳಿಗ್ಗೆ ಗಂಟೆ 6 ಕ್ಕೆ
ಅರಮನೆ ಪೂಜೆ, ಮಧ್ಯಾಹ್ನ ಗಂಟೆ 12:30ಕ್ಕೆ 
ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 3 ಕ್ಕೆ :
ಮಹಾಪೂಜೆ, ಶ್ರೀ ಮಾರಿಯಮ್ಮ ಹಾಗೂ ಚಾಮುಂಡೇಶ್ವರೀ ದೇವಿಯ ದರ್ಶನ ಸೇವೆ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು 
ಕೋಟೆ ಶ್ರೀ ಗಡು ಮಾರಿಯಮ್ಮ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

11 May 2026, 08:05 PM
Category: Kaup
Tags: