ಇತಿಹಾಸ ಪ್ರಸಿದ್ಧ ಪಡುಬಿದ್ರಿ ಚೆಂಡಿಗೆ ಚಾಲನೆ
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಮರುದಿನ ನಡೆಯುವ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಚೆಂಡಿಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ದೇವಳದ ಅರ್ಚಕರಾದ ಪದ್ಮನಾಭ ಭಟ್ ಪೂಜೆ ಸಲ್ಲಿಸಿ, ಚೆಂಡಿನ ಸೇವಾಕರ್ತರಾದ ಬೇಬಿ ಪೂಜಾರ್ತಿ ಮನೆಯವರು ಚೆಂಡನ್ನು ನಡ್ಸಾಲು ಗುತ್ತು ಶ್ರೀನಾಥ ಹೆಗ್ಡೆ ಮತ್ತು ಬಗ್ಗೇಡಿ ಗುತ್ತು ಶೇಖರ ಶೆಟ್ಟಿ ಸಮ್ಮುಖ ಹಸ್ತಾಂತರಿಸಿದರು.
ಪಾದೆಬೆಟ್ಟು, ನಡ್ಸಾಲು ಯುವಕರ ತಂಡ ದೇವಳದ ಮುಂಭಾಗದಲ್ಲಿ ಚೆಂಡು ಆಡುವ ಮೂಲಕ ಪಡುಬಿದ್ರಿ ಚೆಂಡು ಪ್ರತಿವರ್ಷ ಜರಗುತ್ತಿದೆ.
ಈ ಸಂದರ್ಭ ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಪೇಟೆಮನೆ ಪ್ರಕಾಶ್ ಶೆಟ್ಟಿ, ಅನಿಲ್ ಶೆಟ್ಟಿ, ಸೇವಾಕರ್ತರ ಮನೆಯವರಾದ
ಅನೂಜ್ ಕರ್ಕೇರ, ಧನುಷ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
