ಮೇ 17 (ನಾಳೆ) : ಪಡುಬಿದ್ರಿ ದೇವಳದಲ್ಲಿ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮ
Thumbnail

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ ಇಲ್ಲಿಯ ಸಮಗ್ರ ಜೀರ್ಣೋದ್ಧಾರ - ಪುನಃ ಪ್ರತಿಷ್ಠೆ - ಬ್ರಹ್ಮಕಲಶೋತ್ಸವದ ಸಂಕಲ್ಪದೊಂದಿಗೆ ಹಮ್ಮಿಕೊಂಡ ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ದೀಪಾರಾಧನೆಯೊಂದಿಗೆ ಸಂಕಲ್ಪ – ಸಂಪನ್ನ – ಸಂಭ್ರಮ ಕಾರ್ಯಕ್ರಮವು ಮೇ 17, ಆದಿತ್ಯವಾರ ಪ್ರಾತ:ಕಾಲ ಘಂಟೆ 5-45ಕ್ಕೆ
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ದೊರೆಯಲಿದೆ.

ಈ ಸಂದರ್ಭ ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಶ್ರೀ ಭವಾನಿಶಂಕರ ಹೆಗ್ಡೆ, ಶ್ರೀಪತಿ ಕೊರ್ನಾಯ, ಕಾರ್ಯನಿರ್ವಹಣಾಧಿಕಾರಿ ರಾಜ್‌ ಗೋಪಾಲ್ ಉಪಾಧ್ಯಾಯ, ಪ್ರಧಾನ ಅರ್ಚಕರುಗಳಾದ  ಎಚ್. ಪದ್ಮನಾಭ ಭಟ್, 
ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರವೀಂದ್ರನಾಥ್ ಜಿ. ಹೆಗ್ಡೆ, 
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ, 
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ
ಪ್ರಶಾಂತ್ ಶೆಣೈ ಉಪಸ್ಥಿತರಿರಲಿದ್ದಾರೆ.

ಬೆಳಿಗ್ಗೆ ಘಂಟೆ 6ರಿಂದ ಸಂಜೆ ಘಂಟೆ 6ರ ವರೆಗೆ ಸ್ಥಳೀಯ ಆಹ್ವಾನಿತ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಘಂಟೆ 6-15ಕ್ಕೆ ದೀಪಾರಾಧನೆಗೆ ಅದಮಾರು ಮಠದ 
ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. 

ಸಂಜೆ ಘಂಟೆ 7ಕ್ಕೆ ವೇದಮೂರ್ತಿ ಅಚ್ಚಡ ಶ್ರೀನಿವಾಸ ಆಚಾರ್ ಇವರಿಗೆ ಅಭಿನಂದನೆ, 
ಸಂಜೆ 7-30ರಿಂದ 9 ರವರೆಗೆ  ಗಾಯಕಿ  ಶಾಂತೇರಿ ಲಿಖಿತ್ ಪ್ರಭು, ಮಂಜೇಶ್ವರ ಮತ್ತು ಬಳಗದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜರಗಲಿದ್ದು ಸದ್ಭಕ್ತ ಬಾಂಧವರೆಲ್ಲ ಭಾಗವಹಿಸಬೇಕೆಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಪ್ರಕಾಶ್ ಶೆಟ್ಟಿ ಮತ್ತು ಭಜನೆ – ಸಂಕೀರ್ತನೆ - ಶಿವಪಂಚಾಕ್ಷರಿ ಜಪಯಜ್ಞ ಸಮಿತಿಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Additional image
16 May 2026, 02:50 PM
Category: Kaup
Tags: