ಕಾಪು : ಮುಂಗಾರು ಪೂರ್ವದಲ್ಲೇ ಸಮಸ್ಯೆಗಳಿದ್ದೆಡೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಗಮನಹರಿಸಿ
Thumbnail

ಕಾಪು : ಅಪಾಯವಾದ ಮೇಲೆ ಹಾಗೆ ಆಗಬಾರದಿತ್ತು ಆಗಿ ಹೋಯಿತು ಎನ್ನುವ ಮೊದಲೇ ಅಪಾಯದ ಮುನ್ಸೂಚನೆ ಅರಿಯಬೇಕಿದೆ. ಇದು ಈ ಭಾರಿಯ ಮಳೆಗೂ ಮುನ್ನ ಕಾಪು ತಾಲೂಕಿನ ಆಡಳಿತ ವರ್ಗ, ಜನಪ್ರತಿನಿಧಿಗಳು ಅರಿಯಬೇಕಾದ ಕಟು ಸತ್ಯವಾಗಿದೆ.

ಪ್ರತಿ ಬಾರಿ ಮಳೆಯಿಂದ ಕಾಪು ತಾಲೂಕಿನ ಕೆಲವೆಡೆಗಳಲ್ಲಿ ಅನಾಹುತಗಳು ಸಂಭವನೀಯ. ಇದಕ್ಕೆ ಅಧಿಕಾರಿ ವರ್ಗ ಸರ್ವಸನ್ನದ್ಧರಾಗಿ ಮೊದಲೇ ಪೂರ್ವ ತಯಾರಿ ಮಾಡಬೇಕಿದೆ.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸದಸ್ಯರು ಅಧಿಕಾರದಲ್ಲಿದ್ದಾರೆ. ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಸದಸ್ಯರ ಅಧಿಕಾರಾವಧಿ ಮುಗಿದಿದ್ದರೂ ಮಾನವೀಯ ನೆಲೆಯಿಂದ ಅವರು ಕಾರ್ಯ ನಿರ್ವಹಿಸುವೆಡೆಗೆ ಮನಸ್ಸು ಮಾಡಿ‌ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ.

ನೀರು ಹರಿಯಲು ತೋಡಿನ ವ್ಯವಸ್ಥೆ, ಹೂಳು ತುಂಬಿದಲ್ಲಿ ಹೂಳೆತ್ತುವ ಕಾರ್ಯ, ಕೆರೆ, ನದಿ ವ್ಯಾಪ್ತಿಯ ಪ್ರದೇಶದಲ್ಲಿ, ರಸ್ತೆಯ ಬದಿಯ ಹಳೆಯ ಮರಗಳು, ಗೆಲ್ಲಿಗೆ ತಾಗಿದ ವಿದ್ಯುತ್ ತಂತಿಗಳ ಬಗ್ಗೆ  ಮುನ್ನೆಚ್ಚರಿಕೆ ಅನಿವಾರ್ಯವಾಗಿದೆ. ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಿದೆ.

ಮಳೆಯ ಅವಾಂತರದಿಂದ ಹಾನಿಗೀಡಾಗುವ ಪ್ರದೇಶದಲ್ಲಿ ಜನರು ಜಾಗರೂಕರಾಗಿದ್ದು, ಅಲ್ಲಿಯ ಸಮಸ್ಯೆಗೆ ಮುಂಗಾರು ಪ್ರಾರಂಭದ ಮುನ್ನವೇ ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯ ಮಾಡಿ.

ಅವಾಂತರದ ನಂತರ ಬಂದು ನೋಡಿ ಕ್ರಮ ವಹಿಸುವ ಭರವಸೆ ನೀಡಿದರೆ ಏನು ಪ್ರಯೋಜನ ?

17 May 2026, 09:06 AM
Category: Kaup
Tags: