ಕಾಪು : ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ
ಕಾಪು : ಸುಜ್ಞಾನ ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಮತ್ತು ಕಾಪು ಚಾರಿಟೇಬಲ್ ಟ್ರಸ್ಟ್ (ರಿ.) ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ಮೇ 16ರಂದ ಮೇ 22 ರವರೆಗೆ ಕಾಪುವಿನ ಕಲ್ಯ ಸುಧಾಮ ಸಭಾಭವನದಲ್ಲಿ ಜರಗಲಿರುವ ಉಚಿತ ಹಿಂದೂ ಸಾರ್ವಜನಿಕ ಧಾರ್ಮಿಕ ಶಿಬಿರವನ್ನು ಪೇಜಾವರ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ, ಶುಭಹಾರೈಸಿದರು.
ಈ ಸಂದರ್ಭ ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಕರ್ನಾಟಕ ಬ್ಯಾಂಕ್ ಡಿಜಿಎಮ್ ರಮೇಶ್ ವೈದ್ಯ, ಕರ್ನಾಟಕ ಬ್ಯಾಂಕ್, ಪಣಿಯೂರು ಶಾಖೆಯ ಮ್ಯಾನೇಜರ್ ಬಾಲಕೃಷ್ಣ ರಾವ್, ಡಾ.ಸೀತಾರಾಮ ಭಟ್ ದಂಡತೀರ್ಥ, ಶಿಬಿರ ನಿರ್ವಾಹಕರಾದ ಶ್ರೀನಿವಾಸ ಪೆಜತ್ತಾಯ,
ರಾಮಕೃಷ್ಣ ತಂತ್ರಿ ಕಲ್ಯ, ವಿದ್ಯಾಧರ ಪುರಾಣಿಕ ಕಲ್ಯ, ಭಗವನ್ ದಾಸ್ ಶೆಟ್ಟಿಗಾರ್, ಶಿಬಿರದ ಸಹ ನಿರ್ವಾಹಕ ಪವನ್ ಕುಮಾರ್ ಉಪಸ್ಥಿತರಿದ್ದರು.
ಮನೋಹರ್ ರಾವ್ ಕಲ್ಯ ವಂದಿಸಿದರು.
