ಪಂಜಿಮಾರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ "ಉದ್ಭವ" ಲೋಕಾರ್ಪಣೆ
Thumbnail

ಕಾಪು : ಗ್ರಾಮೀಣ ಭಾಗದ ಸಂಘಗಳು ಬಲಗೊಳ್ಳುತ್ತಿವೆ. ಸ್ವಂತ ಕಟ್ಟಡದ ಕನಸು ನನಸಾಗಿದೆ. ದಾನಿಗಳ ಸಹಕಾರದೊಂದಿಗೆ ಮಾಡಿದ ಈ ಸಾಧನೆಗೆ ಅಭಿನಂದನೆಗಳು. ಹಾಲಿನ ಸಂಗ್ರಹಣೆ 500 ರಿಂದ 600 ಲೀಟರ್‌ಗಳಿಗೆ ಏರಿಸಬೇಕು. ರಾಜ್ಯದ 15 ಒಕ್ಕೂಟಗಳಲ್ಲಿ ಗರಿಷ್ಠದರ ನೀಡುವ ಒಕ್ಕೂಟ ನಮ್ಮದು. ಲಾಭಾಂಶ ಕಡಿಮೆ ಮಾಡಿ ರೈತರಿಗೆ ನೀಡುತ್ತಿದ್ದೇವೆ. ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಗುಣಮಟ್ಟದ ಕಲಬೆರಕೆ ರಹಿತ ಹಾಲು ಕೊಡಿ, ಉತ್ತಮ ಮಾರುಕಟ್ಟೆ ಒದಗಿಸುತ್ತೇವೆ ಎಂದು ದ.ಕ.ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ನುಡಿದರು. 
ಅವರು ಮಂಗಳವಾರ ಶಿರ್ವ ಸಮೀಪದ ಪಂಜಿಮಾರು ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಇವರು ಖರೀದಿಸಿದ 4 ಸೆಂಟ್ಸ್ ಸ್ಥಳದಲ್ಲಿ ನಿರ್ಮಿಸಿದ ಸ್ವಂತ ಕಟ್ಟಡ "ಉದ್ಭವ"ವನ್ನು ಲೋಕಾರ್ಪಣೆಗೊಳಿಸಿ ಕೋಡು ಮುಲ್ಕಾಡಿ ಶ್ರೀದುರ್ಗಾಪರಮೆಶ್ವರೀ ದೇವಳದ ಸಭಾಂಗಣದಲ್ಲಿ ಏರ್ಪಡಿಸಿದ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಾಲಿನ ಉತ್ಪನ್ನಗಳನ್ನು ವಿವಿಧ ಮಾದರಿಯಲ್ಲಿ ಪರಿವರ್ತಿಸಿ ಜನರಿಗೆ ತಲುಪಿಸುತ್ತಿದ್ದೇವೆ. ತಿರುಪತಿಗೆ ನಂದಿನಿ ತುಪ್ಪ ಹೋಗುತ್ತದೆ. ಒಕ್ಕೂಟ ಹೈನುಗಾರರಿಗೆ ವಿವಿಧ ಯೋಜನೆಗಳ ಮೂಲಕ ಪಶುಆಹಾರ,  ಪೂರಕ ವಿವಿಧ ಪರಿಕರಗಳಿಗೆ ಅನುದಾನ ನೀಡುತ್ತಿದೆ ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ಪಂಜಿಮಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕೋಡು ವಹಿಸಿದ್ದರು. 

ಈ ಸಂದರ್ಭದಲ್ಲಿ ಪಂಜಿಮಾರು ಘಟಕದ ವತಿಯಿಂದ ಮಂಗಳೂರು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಮತ್ತು ಉಪಾಧ್ಯಕ್ಷ ಉದಯ ಎಸ್ ಕೊಟ್ಯಾನ್,  ಕರ್ನಾಟಕ ಹಾಲು ಮಹಾ ಮಂಡಲ ಬೆಂಗಳೂರು ಮತ್ತು ದ.ಕ. ಹಾಲು ಒಕ್ಕೂಟ ನಿ. ಮಂಗಳೂರು ಇದರ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಪಂಜಿಮಾರು ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳನ್ನು ಅಭಿನಂದಿಸಲಾಯಿತು. 

ಉದಯ ಎಸ್ ಕೋಟ್ಯಾನ್, ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿನ ಗಣ್ಯರು ಶುಭಾಶಂಸನೆ ಗೈದರು. 

ವೇದಿಕೆಯಲ್ಲಿ ನಿರ್ದೇಶಕರುಗಳಾದ ಸುಧಾಕರ ಶೆಟ್ಟಿ ಮೂಡಾರು, ಕೆ.ಶಿವಮೂರ್ತಿ, ಮಮತಾ ಆರ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಕಾಪು ಇದರ ಯೋಜನಾಧಿಕಾರಿ ಮಮತಾ ಶೆಟ್ಟಿ, ಶ್ರೀಮುಲ್ಕಾಡಿ ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಶಿರ್ವ ವ್ಯ.ಸೇ.ಸ.ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ವಲದೂರು ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷ ಅಶೋಕ್ ಕುಮಾರ್ ವಲದೂರು, ಬಂಟಕಲ್ಲು ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಬಂಟಕಲ್ಲು ಮಾಧವ ಕಾಮತ್, ಕೋಡು ಶಾಲಾ ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ರಾಜೇಶ್ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಮಾಧವ ಐತಾಳ್, ಸಹಾಯಕ ವ್ಯವಸ್ಥಾಪಕ ಡಾ.ಪ್ರಶಾಂತ್ ಆರ್.ಜಿ, ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್, ಪಂಜಿಮಾರು ಸಂಘದ ಉಪಾಧ್ಯಕ್ಷ ನಿತ್ಯಾನಂದ ನಾಯಕ್ ಪಾಲಮೆ ಉಪಸ್ಥಿತರಿದ್ದರು.

 ಪ್ರಸಾದ್ ಶೆಟ್ಟಿ ವಲದೂರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಪೂಜಾರಿ ವಲದೂರು ವರದಿ ವಾಚಿಸಿ, ವಂದಿಸಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಯಶವಂತ ನಿರೂಪಿಸಿದರು.

20 May 2026, 12:36 PM
Category: Kaup
Tags: