ಕಾಪು : ಮಜೂರು ಪ್ರೀಮಿಯರ್ ಲೀಗ್-2026
Thumbnail

ಕಾಪು : ಮಜೂರು ಪ್ರೀಮಿಯರ್ ಲೀಗ್ -2026 ಎಂ.ಪಿ.ಎಲ್ ಸೀಸನ್ 05 ಇದರ ಉದ್ಘಾಟನೆಯನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಆಜ್ಮತ್ ಆಲಿರವರು ನೆರವೇರಿಸಿದರು.
 ನೆರವೇರಿಸಿ ಮಾತನಾಡಿದ ಅವರು ಈ ರೀತಿಯ ಕ್ರೀಡಾಕೂಟ ಆಯೋಜಿಸಿದ ಯುವಕರ ಬಗ್ಗೆ ಮೆಚ್ಚುಗೆ ವಹಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇಲ್ಲಿಯ 
ಯುವಕರು ಸಾಮಾಜಿಕ ಕಳಕಳಿ ಹಾಗೂ ಕ್ರೀಡಾಕೂಟಕ್ಕೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಸ್ಲಾಘನೀಯ ಎಂದು ಪ್ರೋತ್ಸಹಿಸಿ ಮಾತನಾಡಿದರು. 

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಪ್ರಥಮ ಬಹುಮಾನ ಪಡೆದ ಫೈಝಿ ಬಾಯ್ಸ್ ಹಾಗೂ ದ್ವಿತೀಯ ಬಹುಮಾನ ಪಡೆದ ಫ್ರೆಂಡ್ಸ್ ಮಜೂರು ತಂಡಕ್ಕೆ ಶುಭ ಹಾರೈಸಿದರು. 

ಅತಿಥಿಗಳಾಗಿ ಭಾಗವಹಿಸಿದ ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ಮಾತನಾಡಿ ಈ ಕ್ರೀಡಾಕೂಟಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು.

ಅನಿವಾಸಿ ಭಾರತೀಯ ಉದ್ಯಮಿ ರೈಟ್ ಚಾಯ್ಸ್ ಇದರ ಮಾಲಕರಾದ ಆಯಾಜ್ ಕೈಕಂಬ, ಮಾಜಿ ಕಾಪು ಪುರಸಭೆ ಸದಸ್ಯರಾದ ಇಮ್ರಾನ್ ಮಜೂರು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಕ್, ಎಸ್.ಡಿ.ಪಿ.ಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೆ.ಪಿ ಸಾದಿಕ್, ಅಯಾನ್ ಡೆಕೋರೇಷನ್ ಮಾಲಕರಾದ ಆಸೀಫ್ ಮಜೂರು, ಎಂ ಹೆಚ್ ಹಮೀದ್,ಶೋಕತ್ತಾಲಿ ಮಲ್ಲಾರು, ಆಯಾಜ್ ಕುಚ್ಚಿಗುಡ್ಡೆ, ಫಕ್ರುದ್ದೀನ್ ಮಜೂರು, ಹರೀಶ್ ಪೂಜಾರಿ, ನಸ್ರುದ್ದಿನ್ ಮಜೂರು, ದೀಪಕ್ ಕುಮಾರ್, ಇಸ್ಮಾಯಿಲ್ ಎಂ.ಎಂ.ಎಸ್, ಎರ್ಮಳ್,,ಹರೀಶ್ ಪೂಜಾರಿ,ಪ್ರಕಾಶ್ ಶೆಟ್ಟಿ, ಫಯಾಜ್ ಎಫ್.ಎ ವಿಲ್ಲಾ ,ಮಂಜುನಾಥ್ ಮಜೂರು, ಕೌಸರ್ ಜುಬೈಲ್ ಇನ್ನಿತರರು ಉಪಸ್ಥಿತಿಯೊಂದಿಗೆ 
ಕಾರ್ಯಕ್ರಮದ ಆಯೋಜಕರಾದ 
ಮಿಸ್ಕಿನ್ ಫೌಂಡೇಶನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಶಂಶುದ್ದಿನ್ ಉಮ್ಮರ್,ಸಲೀಂ ಮಜೂರ್ ಕಾಪು ಸುಲ್ತಾನ್ ಚಾಯ್ಸ್ ಇದರ ಮಾಲಕರಾದ ಕಬೀರ್ ಮಜೂರು,.  ಅಕ್ಬರಲಿ ಮುಸ್ತಾಫಾ ಶಾಯಿಲ್ ಮಜೂರ್  ತಂಡಗಳ ಉಸ್ತುವಾರಿಯಾಗಿ ,ಫೈಸಲ್ ಮಜೂರು ಹಾಗೂ  ಹಮೀದ್ ಮಲ್ಲಾರ್ ಮತ್ತಿತರರು  ಉಪಸ್ಥಿತರಿದ್ದರು.

20 May 2026, 01:24 PM
Category: Kaup
Tags: