ಉಡುಪಿ ಜಿಲ್ಲಾ ಜೆಡಿಎಸ್ : ಪಕ್ಷ ಸಂಘಟನಾ ಕಾರ್ಯಕ್ರಮ
Thumbnail

ಉಡುಪಿ :  ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರ ಸಮ್ಮುಖದಲ್ಲಿ, ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜಯ ಪೂಜಾರಿಯವರ ನಾಯಕತ್ವದಲ್ಲಿ ಜನತಾದಳ( ಜಾತ್ಯತೀತ )ಪಕ್ಷದ ಪಕ್ಷ  ಸಂಘಟನಾ ಕಾರ್ಯಕ್ರಮ ಜರಗಿತು.

ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ, ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಮಾಹಿತಿಯನ್ನು ನೀಡಿ, ಪಕ್ಷದ ಇತಿಹಾಸ, ತತ್ವಸಿದ್ಧಾಂತಗಳು ಹಾಗೂ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಪಕ್ಷದ ಪಾತ್ರದ ಬಗ್ಗೆ ವಿವರಿಸಿದರು.
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ, ರೈತಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ ಅವರು, ಪಕ್ಷದ ಕಾರ್ಯಕರ್ತರು ಈ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.

ಜ್ಯೋತಿ ಅಶೋಕ್, ಕಾಶಿನಾಥ್, ಬಸವರಾಜ್, ದೇವರಾಜ್, ಅಶೋಕ, ಶ್ರೀಮತಿ ಹಲನ್, ಪ್ರಶಾಂತ್ ಪೂಜಾರಿ, ಮಹೇಶ್ ಪೂಜಾರಿ, ಬಲಭೀಮರಾಯ ಪಕ್ಷಕ್ಕೆ ಸೇರ್ಪಡೆಯಾದರು.

 ಈ ಸಂದರ್ಭ ಜಿಲ್ಲಾ ಕಾರ್ಯಧ್ಯಕ್ಷರಾದ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಾಜ್ಯ ನಾಯಕರಾದ ದಕ್ಷಿತ ಆರ್ ಶೆಟ್ಟಿ, ಗಂಗಾಧರ ಬಿರ್ತಿ, ದಕ್ಷಿಣಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೋಗೇಶ್ ಶೆಟ್ಟಿ ಜಪ್ಪು, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸಂಜಯ್ ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶಾಲಿನಿ ಆರ್ ಶೆಟ್ಟಿ ಕೆಂಚನೂರು, ಕಾರ್ಯಾಧ್ಯಕ್ಷರಾದ ಅನಸೂಯಾ ಶೆಟ್ಟಿ,
ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ದೇವರಾಜ ತೊಟ್ಟಂ, ರಾಮರಾವ್, ಹರಿಣಾಕ್ಷಿ, ಮೋಹಿನಿ ಎಸ್, ರಂಗ ಆರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Additional image
08 Jun 2026, 12:13 PM
Category: Udupi
Tags: