ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಾಲೆಗೆ ರಿಲಯನ್ಸ್ ಫೌಂಡೇಶನ್‌ನಿಂದ ಶಾಲಾ ವಾಹನ ಕೊಡುಗೆ
Thumbnail

ಕಾಪು : ಪಡುಬೆಳ್ಳೆ ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಗೆ ರಿಲಯನ್ಸ್ ಫೌಂಡೇಶನ್ ಇದರ ವತಿಯಿಂದ ಶುಕ್ರವಾರ ನೂತನ ಬಸ್ ಇದರ ಹಸ್ತಾಂತರ ಕಾರ್ಯಕ್ರಮ ಜರುಗಿತು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈ ಕಸ್ಟಮ್ ಕ್ಲಿಯರೆನ್ಸ್ ವಿಭಾಗದ ಹಿರಿಯ ವ್ಯವಸ್ಥಾಪಕರಾದ ದಯಾನಂದ ಸಿ.ಕೊಟ್ಯಾನ್  ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಜವಾಬ್ದಾರಿಗಳನ್ನು ಅರಿತು ಬಾಳಿ ಮುಂದೆ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಿ ಗುರುಹಿರಿಯರಿಗೆ ಗೌರವ ನೀಡಿ ದೇಶದ ಸತ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು. 

ಮುಂಬೈನ್ ಚಾರ್ಟಡ್ ಅಕೌಂಟೆಂಟ್ ಜಯಂತ ಪೂಜಾರಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಮೋಹನ್ ಸಿ.ಕೊಟ್ಯಾನ್ ವಹಿಸಿದ್ದರು. 

ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಶಿವಾಜಿ ಎಸ್.ಸುವರ್ಣ ಬೆಳ್ಳೆ, ಕಟಪಾಡಿ ಶಂಕರ ಪೂಜಾರಿ, ಪ್ರಕಾಶ್ ಪಾಲಮೆ, ಗೀತಾ ವಾಗ್ಲೆ, ಸುರೇಶ್ ಪೂಜಾರಿ,  ನಿರಂಜನ್ ಕರ್ಕೇರಾ ಹೆಜಮಾಡಿ, ನವೀನ್ ಕೊಟ್ಯಾನ್ ಹೆಜಮಾಡಿ, ಶರತ್ ಕುಮಾರ್, ನಿರಂಜನ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ವಾರಿಜ ಸಾಲಿಯಾನ್, ಪ್ರಸಾದ್ ಭಂಡಾರಿ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು. 

ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕ ರಾಘವೇಂದ್ರ ಸಾಲಿಯಾನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ವೀಣಾ ನಾಯಕ್, ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್ ವಂದಿಸಿದರು.

 

20 Jun 2026, 08:38 AM
Category: Kaup
Tags: