ಕಾಪು : ಕುಲಾಲ ಸಮಾಜ (ರಿ.) ಕಳತ್ತೂರು ಒಕ್ಕೂಟ ಇದರ ಎಂಟನೇ ವರ್ಷದ ಮಹಾಸಭೆಯು ಕಳತ್ತೂರು ಪುಂಚಲಕಾಡು ಸುದೀಪ್ ಕುಲಾಲ್ ಮನೆಯಲ್ಲಿ ಜರುಗಿತು.
ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಸಿದರು.
ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಾಂಡು ಕುಲಾಲ್ ಪಯ್ಯಾರು ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ SSLC ಮತ್ತು PUC ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಿಯುಸಿ ಪರೀಕ್ಷೆ ಯಲ್ಲಿ ರಾಜ್ಯಕ್ಕೆ 4 ನೇ ಅಂಕ ಗಳಿಸಿದ ಕಾವ್ಯ ಕುಲಾಲ್ ಹಾಗೂ SSLC ಯಲ್ಲಿ ಸಾಧನೆಗೈದ ಭವಿಷ್ ಮೂಲ್ಯ, ಪಿಯುಸಿಯಲ್ಲಿ ಸಾಧನೆಗೈದ ನಿಹಾರ್ ಕುಲಾಲ್, ಸಾಕ್ಷಿತ್ ಕುಲಾಲ್ ರವರಿಗೆ ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜೇಶ್ ಕುಲಾಲ್ ಪಯ್ಯಾರು ಶಂಕರ್ ಮೂಲ್ಯ ಇರಂದಾಡಿ, ಸಾಧುಮೂಲ್ಯ, ಕೃಷ್ಣ. ಕೆ. ಮೂಲ್ಯ, ಹರೀಶ್ ಕೆ ಮೂಲ್ಯ, ಉದಯ ಕುಲಾಲ್, ಮಹೇಶ್ ಕುಲಾಲ್, ಯಾಧವ ಕುಲಾಲ್, ತೋತು ಮೂಲ್ಯ ಉಪಸ್ಥಿತರಿದ್ದರು.
ಶಾನ್ವಿತ್ ಕುಲಾಲ್ ಪ್ರಾರ್ಥಿಸಿದರು. ಸಂತೋಷ್ ಎಸ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ವರದಿ : ಉದಯ ಕುಲಾಲ್, ಕಳತ್ತೂರು
