ಕಾಪು : ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಜುಲೈ 12ರಂದು ಕಾಪು ಲೈಟ್ ಹೌಸ್ ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ "ಐ ಲವ್ ಕಾಪು" ಎಲ್ಈಡಿ ಫಲಕವನ್ನು ಲೋಕಾರ್ಪಣೆ ಮಾಡಿದರು ಮತ್ತು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ ಹಸ್ತಾಂತರ ಮಾಡಲಾಯಿತು.
ರಾಷ್ಟ್ರಾಧ್ಯಕ್ಷರು ಘಟಕವನ್ನು ಉದ್ದೇಶಿಸಿ ಮಾತನಾಡಿ 29 ವರ್ಷಗಳನ್ನು ಪೂರೈಸಿರುವ ಕಾಪು ಘಟಕ, ಜೇಸಿಐ ಗೆ ಬಹಳಷ್ಟು ಕೊಡುಗೆಯನ್ನು ನೀಡಿದೆ, ಪ್ರತೀ ವರ್ಷ ಸಾರ್ವಜನಿಕರಿಗೆ ಶಾಶ್ವತ ಯೋಜನೆಯನ್ನು ನೀಡುತ್ತಿರುವ ಈ ಘಟಕ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಸಂಶನೆಗೈದರು.
ವಲಯ 15ರ ವಲಯಾಧ್ಯಕ್ಷ JFS ಸಂತೋಷ್ ಶೆಟ್ಟಿ ಮಾತನಾಡಿ ಕಾಪು ಘಟಕ ಬಹಳಷ್ಟು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು,
ವಲಯ 15ರ ನಂದಿನಿ ಪ್ರಾಂತ್ಯದ ಉಪಾಧ್ಯಕ್ಷ JFD ಅರುಣ್ ಮಂಜ, ಆಡಳಿತ ವಿಭಾಗದ ನಿರ್ದೇಶಕ JCI Sen ಸುಹಾಸ್ ಮರಿಕೆ, ಶಾಶ್ವತ ಯೋಜನೆಯ ವಲಯ ಸಂಯೋಜಕ ಸುನಿಲ್ ಕುಮಾರ್, ವಲಯ ಉಪಾಧ್ಯಕ್ಷರುಗಳು, ವಲಯಧಿಕಾರಿಗಳು, ಕಾಪು ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಕಾಪು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಕರ ಸಾಲ್ಯಾನ್, ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ JFM ವಿಕ್ಕಿ ಪೂಜಾರಿ ಮಡುಂಬು ಸ್ವಾಗತಿಸಿದರು, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದು, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ ಧನ್ಯವಾದಗೈದರು.
ನಂತರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆಯಲಾಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಅಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಕಾಳಿಕಾಂಬಾ ದೇವಿಯ ದರುಶನ ಪಡೆಯಲಾಯಿತು, ದೇವಳದ ವತಿಯಿಂದ ಗೌರವಿಸಲಾಯಿತು, ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ, ಸಮಿತಿ ಸದಸ್ಯರು, ಅರ್ಚಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಜುಲೈ 12ರಂದು ಕಾಪು ಲೈಟ್ ಹೌಸ್ ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ "ಐ ಲವ್ ಕಾಪು" ಎಲ್ಈಡಿ ಫಲಕವನ್ನು ಲೋಕಾರ್ಪಣೆ ಮಾಡಿದರು ಮತ್ತು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ ಹಸ್ತಾಂತರ ಮಾಡಲಾಯಿತು.