ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಆಯ್ಕೆ
Thumbnail

ಶಿರ್ವ : ಇಲ್ಲಿನ ಸಂತಮೇರಿ ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿರ್ವ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಕೆ. ಆರ್ ಪಾಟ್ಕರ್ ಪುನಾರಾಯ್ಕೆಯಾಗಿದ್ದಾರೆ.

2026- 27 ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಶಂಕರ್ ಕೆ., ಉಪಾಧ್ಯಕ್ಷರಾಗಿ ಡಾ. ಗೖನಲ್ ಡಿ'ಮೆಲ್ಲೋ, ಕಾರ್ಯದರ್ಶಿ ಮೋಹನ್ ನೊರೋನ್ನಾ, ಕೋಶಾಧಿಕಾರಿ ಜುಲಿಯಾನ್ ರೊಡ್ರಿಗಸ್, ಜೊತೆ ಕಾರ್ಯದರ್ಶಿ ಕ್ಲಾರ ಪಿರೇರಾ.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೋರ್ಬಾಟ್ ಡಿ'ಸೋಜ, ಮೆಲ್ವಿನ್ ಅರಾನ್ನ,  ಅನಿತಾ ಮೆಂಡೋನ್ಸಾ, ಫೆಡ್ರಿಕ್ ಪಿಂಟೊ, ಡೇನಿಸ್ ಮಥಾಯಸ್, ಇರ್ವಿನ್ ಡಿ'ಸೋಜಾ, ವಸಂತ್ ಅಂಚನ್, ಮೆಕ್ಸಿಮ್ ಡಿ'ಸೋಜ, ಮರ್ವಿನ್ ಮೆನೇಜಸ್, ಮನೋಜ್ ಮೆನೇಜಸ್.
ಲೆಕ್ಕಪರಿಶೋಧಕರಾಗಿ ರಾಯ್ ಮಥಾಯಸ್ ಪುನರಾಯ್ಕೆಯಾದರು.
 

17 Jul 2026, 09:30 AM
Category: Kaup
Tags: