ಜು.19 : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ - ಆಶಾಡ ಹಬ್ಬ ಆಚರಣೆ
Thumbnail

ಮುಂಬಯಿ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ಮಹಿಳಾ ವಿಭಾಗದ ವತಿಯಿಂದ ಆಟಿ ತಿಂಗಳ ಆಷಾಡ ಹಬ್ಬವು ಉತ್ಕರ್ಷ ವಿದ್ಯಾಮಂದಿರ, ಪುಷ್ಪ ಪಾರ್ಕ್ ಮಲಾಡ್ ಪೂರ್ವ, ಇಲ್ಲಿ ಜು. 19ರಂದು ಮಧ್ಯಾಹ್ನ 4 ರಿಂದ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಇತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಈ ಸಮಾರಂಭಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಪರವಾಗಿ  ಕಾರ್ಯಾಧ್ಯಕ್ಷೆ ಶ್ರೀಮತಿ ಕೆ ಆಚಾರ್ಯ, ಕಾರ್ಯದರ್ಶಿ ಶೀಲಾ ಎಂ ಪೂಜಾರಿ, ಕೋಶಾಧಿಕಾರಿ ನಳಿನಿ ಪಿ ಕರ್ಕೆರ, ಉಪ ಕಾರ್ಯಾಧ್ಯಕ್ಷರುಗಳಾದ ಗೀತಾ ಜೆ ಮೆಂಡನ್, ಲಲಿತಾ ಎಸ್ ಗೌಡ ಮತ್ತು ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್ ಆಚಾರ್ಯ ಮತ್ತು ವಿದ್ಯಾ ಡಿ ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್ ರಾವ್ ಮತ್ತು ವಿದ್ಯಾ ಎಸ್ ನಾಯಕ್ ಸಲಹಾ ಸಮಿತಿಯ ಸದಸ್ಯರುಗಳಾದ ಮೋಹಿನಿ ಜೆ ಶೆಟ್ಟಿ ಮತ್ತು ರತ್ನ ಡಿ ಕುಲಾಲ್, ಕಾರ್ಯಕಾರಿ ಸಮಿತಿ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.

17 Jul 2026, 09:35 AM
Category: Kaup
Tags: