ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ ಪದಗ್ರಹಣ
ಶಿರ್ವ : ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ) ಬಂಟಕಲ್ ಇದರ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟಕಲ್ಲು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಇದರ ವಠಾರದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷರಾದ ಮಾಧವ ಕಾಮತ್ ರವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಅಧ್ಯಕ್ಷರು - ಸುಧಾಕರ, ಉಪಾಧ್ಯಕ್ಷರು - ಉಮೇಶ್ ಪ್ರಭು. ಕಾರ್ಯದರ್ಶಿ - ಮುದ್ದು ಕುಲಾಲ್, ಜೊತೆ ಕಾರ್ಯದರ್ಶಿ - ನವೀನ್ ಸನಿಲ್, ಕೋಶಾಧಿಕಾರಿ - ಡೆನಿಸ್ ಡಿಸೋಜ ರವರು ಅಧಿಕಾರ ಸ್ವೀಕರಿಸಿದರು.
ನಿಕಟ ಪೂರ್ವ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಸ್ವಾಗತಿಸಿದರು. ಮುದ್ದು ಕುಲಾಲ್ ರವರು ವಂದಿಸಿದರು. ದಿವಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
