ಬಿಸಿ ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಳ ಹತ್ಯೆ ಅತ್ಯಂತ ದುರದೃಷ್ಟಕರ
Thumbnail

ಕಾರ್ಕಳ : ಹಾಡು ಹಗಲೇ ಕರಾವಳಿಯನ್ನು ಬೆಚ್ಚಿ ಬಿಳಿಸುವ ಘಟನೆ ಬಿಸಿ ರೋಡ್ KSRTC ಬಸ್ ನಿಲ್ದಾಣದಲ್ಲಿ ನಡೆದಿದ್ದು ಬಸ್ ಗೆ ಕಾಯುತ್ತಿದ್ದ ಲಾವಣ್ಯ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡಿರುವಂತದ್ದು ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಇದು ಮಹಿಳೆಯರಲ್ಲಿ ಆತಂಕ ಮೂಡಿಸುವಂತೆ ಆಗಿದ್ದು ಈ ಹಿಂದೆಯೂ ಈ ರೀತಿಯ ಘಟನೆ ನಡೆದಿದ್ದು  ಕಾನೂನು ವ್ಯವಸ್ಥೆ ಸಡಿಲ ಇರುವ ಕಾರಣ ಈ ರೀತಿಯ ಘಟನೆ ಪುನರವರ್ತನೆ ಆಗುತ್ತಿದೆ ಹಾಗಾಗಿ ಯಾವುದೇ ಧರ್ಮವಾಗಲಿ ಯಾವುದೇ ಜಾತಿಯಾಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಆ ಶಿಕ್ಷೆ ಇನ್ನು ಯಾರು ತಪ್ಪು ಮಾಡದಂತೆ ಮುನ್ನೆಚ್ಚರಿಕೆ ಕೊಡುವಂತೆ ಇರಬೇಕು.  

ಕರ್ನಾಟಕದಲ್ಲೂ  ಬುಲ್ಡೋಜರ್ ನಿಯಮವನ್ನು ಜಾರಿಗೊಳಿಸಿ ಹೆಣ್ಣಿಗೆ ಆಗುವ ದೌರ್ಜನ್ಯವನ್ನು ತಡೆಹಿಡಿಯಲು ಕಠಿಣ ಕಾನೂನು ವ್ಯವಸ್ಥೆಗಳನ್ನು ತನ್ನಿ, ಲಾವಣ್ಯನ ಎನ್ನುವ ಅಮಾಯಕಳ ಸಾವಿಗೆ ನ್ಯಾಯ ಕೊಡಿಸುವಂತದ್ದು ಆದಷ್ಟು ತೀರ್ವಗತಿಯಲ್ಲಿ ನಡೆಯಲಿ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆಗ್ರಹಿಸಿದ್ದಾರೆ.

17 Jul 2026, 09:54 AM
Category: Kaup
Tags: