ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದಿಂದ ಬರ ಪೀಡಿತ ಪ್ರದೇಶಗಳ ಸಮೀಕ್ಷೆ
Thumbnail

ಉಡುಪಿ : ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಮುಂಗಾರು ಮಳೆ ಅಭಾವದಿಂದ ಅನೇಕ ಕಡೆ ಬರಗಾಲ ಉಂಟಾಗಿರುತ್ತದೆ. ಜಾತ್ಯತೀತ ಜನತಾದಳ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರು ಮತ್ತು ಕರಾವಳಿ ಉತ್ತರ ಕನ್ನಡ ಭಾಗದ ಅಧ್ಯಯನ ತಂಡದ ಉಸ್ತುವಾರಿಗಳಾದ ಎಸ್. ಎಲ್ ಭೋಜೆಗೌಡರ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲೆಯ ಅನೇಕ ಕಡೆ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿ, ಉಳುಮೆ ಮಾಡಿ ಬಿತ್ತನೆ ಮಾಡಿದ ಫಸಲು ಮಳೆ ಅಭಾವದಿಂದ ಒಣಗಿ ಹೋಗಿದೆ, ರೈತರ ಸಂಕಷ್ಟ ಕೇಳುವವರಿಲ್ಲ , ಇದುವರೆಗೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ತೀವ್ರ ಬೇಸರದ ಸಂಗತಿ,  ಭತ್ತ ಹಾಗೂ ಇನ್ನಿತರ ಬೆಳೆಗಳ ಬಿತ್ತನೆ ಆಗದೆ ಬರಗಾಲದ ಛಾಯೆ ಉಂಟಾಗಿದೆ, ಹಲವಾರು ಕಡೆ ನೀರಿನ ಅಭಾವವು ಉಂಟಾಗಿದೆ, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು, ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದರು.

ಈ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಉಡುಪಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಗರಿಷ್ಠ ಪರಿಹಾರವನ್ನು ಒದಗಿಸಬೇಕೆಂದು ಅಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಉದಯ ಹೆಗ್ಡೆ ಮಲ್ಲಾರ್, ಜಯರಾಮ್ ಆಚಾರ್ಯ, ಉದಯ ಆರ್. ಶೆಟ್ಟಿ, ತಾಲೂಕು ಅಧ್ಯಕ್ಷರು ಶ್ರೀಕಾಂತ್ ಕುಚ್ಚೂರು, ಜಯ ಪೂಜಾರಿ, ದೇವರಾಜ್ ತೊಟ್ಟಮ್, ಅನೂಸೂಯ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಅಕ್ಷಿತ್ ಸುವರ್ಣ, ರತ್ನಾಕರ್ ಸುವರ್ಣ, ಕೀರ್ತಿರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

17 Jul 2026, 10:27 AM
Category: Kaup
Tags: