ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ 2026-27 ನೇ ಸಾಲಿನ ಪದಪ್ರಧಾನ ಸಮಾರಂಭ
Thumbnail

ಕಾಪು : ರೋಟರಿ ಸಮುದಾಯದಳ ಇನ್ನಂಜೆ  ಇದರ 2026-27 ನೇ ಸಾಲಿನ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕಮಂಡಲ ವೇದಿಕೆಯಲ್ಲಿ ನೆರವೇರಿತು.

ಪದ ಪ್ರಧಾನ ಅಧಿಕಾರಿಯಾಗಿ ರೋಟರಿ ಶಂಕರಪುರದ ಅಧ್ಯಕ್ಷರಾದ ರೋ. ಪೌಲ್ ಕ್ವಾಡ್ರಸ್ ರವರು ನೂತನ ಅಧ್ಯಕ್ಷರಾದ ಆರ್‌ಸಿ ಮನೋಹರ್ ಪೂಜಾರಿ, ಕಾರ್ಯದರ್ಶಿ ಆರ್ ಸಿ ಸಿ ಜಗದೀಶ್ ಅಮೀನ್ ಇವರಿಗೆ ಅಧಿಕಾರ ಹಸ್ತಾಂತರಿಸಿ ಪ್ರಮಾಣ ವಚನಗೈದರು.

   ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರ್ ಸಿ ಸಿ ಸಭಾಪತಿ ರೋ. ಎಮ್ ಪಿ ಎಚ್ ಎಫ್ ಜಗನ್ನಾಥ್ ಕೋಟೆ, ಆರ್‌ಸಿಸಿ ಜಿಲ್ಲಾ ಪ್ರತಿನಿಧಿ ಆರ್ಸಿಸಿ ರವಿ ಪ್ರಸಾದ್, ಪಾಸ್ಟ್ ಝೋನ್ 5 ರೋ. ಎಮ್ ಪಿ ಎಚ್‌ಎಫ್  ನವೀನ್ ಅಮೀನ್ ಶಂಕರಪುರ, 
ರೋಟರಿ ಶಂಕರಪುರ ಕಾರ್ಯದರ್ಶಿ ರೋ. ಕ್ಲಿಫರ್ಡ್ ಡಿಮೆಲ್ಲೋ, ಇನ್ನಂಜೆ ಎಸ್ ವಿಎಚ್ ಶಾಲೆಯ ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಪ್ರಭಾಕರ್ ಭಟ್, ಆರ್ ಸಿ ಸಿ  ಇನ್ನಂಜೆಯ ಸಭಾಪತಿ ರೋ. ಮಾಲಿನಿ ಶೆಟ್ಟಿ, ಆರ್‌ಸಿಸಿ ಇನ್ನಂಜೆ ಯ ನಿಕಟಪೂರ್ವ ಅಧ್ಯಕ್ಷರಾದ ವಜ್ರೇಶ್ ಆಚಾರ್ಯ, ನಿಕಟ ಪೂರ್ವ ಕಾರ್ಯದರ್ಶಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಮಾಧ್ಯಮ ಶಿಕ್ಷಕರಾದ ಪ್ರಭಾಕರ್ ಭಟ್ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಲಾ ಬಿ ಮತ್ತು ಇನ್ನಂಜೆ ಎಸ್ ವಿ ಎಚ್ ಪ್ರೌಢಶಾಲೆ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕುಮಾರಿ ಸಾಧಿಕ ಇವರನ್ನು ಸನ್ಮಾನಿಸಲಾಯಿತು. 

 ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. 

 ಜಿಲ್ಲೆ 3182ರ ಆರ್ ಸಿ ಸಿ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಆರ್ ಸಿ ಸಿ ರವಿಪ್ರಸಾದ್ ಮತ್ತು ಆರ್ ಸಿ ಸಿ ಜಿಲ್ಲಾ ಸಭಾಪತಿಯಾಗಿ ಆಯ್ಕೆಯಾದ ರೋ.ಎಮ್ ಪಿ ಎಚ್ ಎಫ್ ಜಗನ್ನಾಥ್ ಕೋಟೆ ಇವರಿಗೆ ಅಭಿನಂದನೆ ಸಮರ್ಪಿಸಲಾಯಿತು. 

ಆರ್ ಸಿ ಸಿ ವಜ್ರೇಶ್ ಆಚಾರ್ಯ ಸ್ವಾಗತಿಸಿ, ಆರ್ ಸಿ ಸಿ ಜಗದೀಶ್ ಅಮಿನ್ ವಂದಿಸಿ, ಆರ್ ಸಿ ಸಿ ಶ್ರೀಕಲಾರವರು ನಿರೂಪಿಸಿದರು.

Additional image
27 Jul 2026, 09:47 PM
Category: Kaup
Tags: