ತುಳುನಾಡಿನ ಸಪ್ತ ಜಾತ್ರೆಗಳಲ್ಲೊಂದಾದ ಕಾಪು ಸುಗ್ಗಿ ಮಾರಿಪೂಜೆ-2020 ಕ್ಷಣಗಣನೆ
Thumbnail
ಕಾಪು : ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದಿರುವ ಕಾಪುವಿನ ಸುಗ್ಗಿ ಮಾರಿಪೂಜಾ ಜಾತ್ರೆಗೆ ಕ್ಷಣಗಣನೆ ಕಾಪುವಿನ ಹಳೇ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ (ಕಲ್ಯ) ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ನಡೆಯುವ ಮಾರಿ ಪೂಜೆಯಲ್ಲಿ ಭಾಗವಹಿಸಲು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಕಾಸರಗೋಡು, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದೂರದ ಮುಂಬಯಿ ಮಹಾನಗರದಿಂದಲೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಮಾರ್ಚ್ 24ರ ಮಂಗಳವಾರ ಮಧ್ಯಾಹ್ನದಿಂದಲೇ ಆಗಮಿಸುತ್ತಾರೆ. ಮಾ. 17 ರಂದು ಬೇಟೆ (ಕುರಿ) ಬಿಡುವ ಮೂಲಕ ಮಾರಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ. ಮಾ. 25 ರಂದು ಬುಧವಾರ ಸಂಜೆಯ ವರೆಗೂ ಮಾರಿ ಪೂಜಾ ಮಹೋತ್ಸವ ಮುಂದುವರಿಯುತ್ತದೆ. ಮಂಗಳವಾರ ರಾತ್ರಿ ಮಾರಿಯಮ್ಮ ದೇವಿಯ ಗದ್ದುಗೆ ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಸಂಖ್ಯೆಯ ಕುರಿ-ಆಡು ಮತ್ತು ಕೋಳಿಗಳನ್ನು ಭಕ್ತರು ಮಾರಿಪೂಜೆಯ ಪ್ರಯುಕ್ತ ಸಮರ್ಪಿಸುತ್ತಾರೆ. ನಮ್ಮ ಕಾಪು
06 Mar 2020, 01:41 PM
Category: Kaup
Tags: