ಉಡುಪಿ : ವಿಶ್ವ ಔಷಧಿಕಾರರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಸರಕಾರಿ ಆಸ್ಪತ್ರೆ ಸೈಬ್ರಕಟ್ಟೆಯ ಫಾರ್ಮಸಿಸ್ಟ್ ಸತೀಶ್ ಶೆಟ್ಟಿ ಇವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಯು. ಪ್ರಸಾದ್ ಭಟ್ , ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್, ರಾಮ್ ಪ್ರಕಾಶ್ , ಕಿರಣ್, ನೀಲಕಂಠ ರಾವ್ , ಇಶ್ರಿಮುಡಿ ರಾಜು, ರವೀಂದ್ರನಾಥ್ ಕಿಣಿ , ಪ್ರಶಾಂತ್ ಜೋಗಿ, ಪೂಜಾರಿ ಗಣೇಶ್ ನಾಯಕ್ ಮತ್ತು ರೋಟರಿ ಸಮುದಾಯ ದಳದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಕಲ್ಬೆಟ್ಟು ಉಪಸ್ಥಿತರಿದ್ದರು.