ಕಾಪು : ಕಲೆಗೆ ಬೆಲೆ ಕಟ್ಟಲಾಗದು, ಚಿತ್ರಕಲೆಯಲ್ಲಿ ಸಾಧನೆಗೈದ ಮುಂದಿನ ಯುವ ಮನಸ್ಸುಗಳಿಗೆ ಮಾದರಿಯಾದ ವಿಕಲಚೇತನ ಕಲಾವಿದ ಗಣೇಶ್ ಕುಲಾಲ್ ಪಂಜಿಮಾರ್ ಇವರ ಕೈ ಚಲಕದಲ್ಲಿ ಮೂಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಕಾರ್ಕಳದ ಶಾಸಕರು ಹಾಗೂ ಸಚಿವರಾದ ವಿ ಸುನಿಲ್ ಕುಮಾರ್ ಅವರ ಚಿತ್ರವನ್ನ ಗಣೇಶ್ ಪಂಜಿಮಾರ್ ಅವರು ಅತಿಥಿ ಗಣ್ಯರ ಜೊತೆ ಅವರಿಗೆ ನೀಡಿದರು.
ಈ ಸುಂದರ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾಪು ವಲಯದ ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಶಂಕರಪುರ, ಕಾಪು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಸರ್ವಜ್ಞ ಆಸರೆ ಕಿರಣ ಬಳಗ ಇದರ ಸಂಚಾಲಕರು ಪ್ರಭಾಕರ್ ಕುಲಾಲ್ ಇನ್ನ, ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಸುಹಾಸ್ ಶೆಟ್ಟಿ, ಅವಿನಾಶ್ ಶೆಟ್ಟಿ, ಸುರೇಂದ್ರ ವರಂಗ, ಸಂದೇಶ್ ಕುಲಾಲ್, ಸಂದೀಪ್ ಕುಲಾಲ್ ಮಂಜರಪಲ್ಕೆ ಬೋಳ, ಪ್ರಭಾಕರ್ ಕುಲಾಲ್ ಬೇಲಾಡಿ ಉಪಸ್ಥಿತರಿದ್ದರು.