ಅಕ್ಟೋಬರ್ 2 : ಶಿರ್ವದಲ್ಲಿ ಸಂಜೀವಿನಿ ಸಂತೆ
Posted On:
29-09-2021 02:45PM
ಕಾಪು : ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ಆದೇಶದಂತೆ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಸಂತೆಯನ್ನು ನಡೆಸುವಂತೆ ನೀಡಿರುವ ಆದೇಶದ ಹಿನ್ನಲೆಯಲ್ಲಿ ಅಕ್ಟೋಬರ್ 2 ರಂದು ಶಿರ್ವ ಪಂಚಾಯತ್ ವಠಾರದಲ್ಲಿ ಸಂಜೀವಿನಿ ಸಂತೆಗೆ ಚಾಲನೆ ನೀಡಲಾಗುವುದು.
ಶಿರ್ವ ಗ್ರಾಮ ಪಂಚಾಯತ್ ಸೇರಿದಂತೆ ಗ್ರಾ.ಪಂ. ಮಜೂರು, ಗ್ರಾ. ಪಂ .ಮುದರಂಗಡಿ, ಗ್ರಾ. ಪಂ. ಕುತ್ಯಾರು, ಗ್ರಾ. ಪಂ ಬೆಳ್ಳೆ ಈ ಪಂಚಾಯತ್ ಗಳ
ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲೆ ತಯಾರಿಸಿದ, ಉತ್ಪಾದಿಸಿದ, ಅಥವಾ ಬೆಳೆದ ಉತ್ಪನ್ನಗಳ ಮಾರಾಟ ಮಾಡಲು ಅವಕಾಶವನ್ನು ನೀಡುವ ಕಾರ್ಯಕ್ರಮವೇ ಸಂಜೀವಿನಿ ಸಂತೆ ಗಾಂಧೀ ಜಯಂತಿಯಂದು ಶಿರ್ವ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಈ ಸಂತೆಯಲ್ಲಿ ದಿನಬಳಕೆಯ ವಸ್ತುಗಳು, ತರಕಾರಿ, ಮಾಸ್ಕ್, ಬಟ್ಟೆ ಚೀಲಗಳು, ಪುಸ್ತಕ,ಸಾಂಬಾರ ಹುಡಿ, ಹೀಗೆ 50 ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಲಿದೆ.
ಐದು ಪಂಚಾಯತ್ ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಗ್ರಾ. ಪಂ ಸದಸ್ಯರು, ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂತೆಯ ಉತ್ಪನ್ನಗಳನ್ನು ಖರೀದಿಸಿ ಸಂಜೀವಿನಿ ಸಂತೆಯನ್ನು ಯಶಸ್ವಿಗೊಳಿಸಬೇಕಾಗಿ ಕೆ. ಆರ್. ಪಾಟ್ಕರ್, ಅಧ್ಯಕ್ಷರು ಶಿರ್ವ ಗ್ರಾ. ಪಂ ಮತ್ತು ಅನಂತಪದ್ಮನಾಭ ನಾಯಕ್
ಅಭಿವೃದ್ದಿ ಅಧಿಕಾರಿ ಶಿರ್ವ ಗ್ರಾ. ಪಂ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.