ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಉಚಿತ ಮಧುಮೇಹ ಶಿಬಿರ
Posted On:
29-09-2021 08:26PM
ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಯಿಂದ ,ರೋಟರಿ ಇಂಡಿಯಾ ಮತ್ತು ಆರ್ ಎಸ್ ಎಸ್ ಡಿ ಐ ಯೋಜನೆಯಾದ ಒಂದೇ ದಿನದಲ್ಲಿ ಮಿಲಿಯನ್ ಬ್ಲಡ್ ಶುಗರ್ ಟೆಸ್ಟ್ ಮಾಡುವ ಉದ್ದೇಶದಿಂದ ಇಡೀ ಭಾರತದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಸೈಬ್ರಕಟ್ಟೆ ರೋಟರಿಯ ಆರೋಗ್ಯ ಕೇಂದ್ರ ದಲ್ಲಿ ಹಮ್ಮಿಕೊಂಡ ಉಚಿತ ಮಧುಮೇಹ ಶಿಬಿರವನ್ನು ರೋ ವಲಯ 3 ರ ಸಹಾಯಕ ಗವರ್ನರ್ ಅವರು ದೀಪ ಬೇಳಗಿಸುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಇಂದು ಇಡೀ ಭಾರತದಲ್ಲಿ ರೋಟರಿ ಅವರಿಂದ ಮಿಲಿಯನ್ ಗಟ್ಟಲೆ ಮಧುಮೇಹ ತಪಾಸಣೆ ನಡೆಸಿ ಗಿನ್ನೆಸ್ ರೆಕಾರ್ಡ್ ಮಾಡುವ ಯೋಜನೆ ಇದ್ದು, ಎಲ್ಲ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಿ ಮತ್ತು ಭಾರತವು ಸಕ್ಕರೆ ಕಾಯಿಲೆಯಲ್ಲಿ ವಿಶ್ವದಲ್ಲಿ 2 ನೆ ಸ್ಥಾನದಲ್ಲಿದ್ದು ಹೆಚ್ಚು ಹೆಚ್ಚು ವಯಸ್ಸಿನ ಭೇದ ಇಲ್ಲದೆ ಕಾಲ ಕಾಲಕ್ಕೆ ರಕ್ತ ತಪಾಸಣೆ ಮಾಡಿ ಈ ಕಾಯಿಲೆ ತಡೆಗಟ್ಟುವಲ್ಲಿ ಸಫಲಾರಗಬೇಕು ಅಂತ ಸಲಹೆ ನೀಡಿದರು.
ಇನ್ನೋರ್ವ ಅತಿಥಿ ಸೈಬ್ರಕಟ್ಟೆಯ ವೈದ್ಯಾಧಿಕಾರಿ ಡಾ.ಜಯಶೀಲ ಆಚಾರ್ ಮಾತನಾಡಿ ಸಕ್ಕರೆ ತುಂಬಾ ಸಿಹಿಯಾಗಿದ್ದು ಅದು ದೇಹದಲ್ಲಿ ಹೆಚ್ಚಾದರೆ ಅಂಗಾಂಗಗಳಿಗೆ ಮಾರಕವಾಗಿ ಬದುಕು ಕಹಿ ಆಗುತ್ತೆ ಆದ್ದರಿಂದ ಸರಿಯಾಗಿ ತಪಾಸಣೆ ನಡೆಸಿ ಮಧುಮೇಹ ಕಾಣಿಸಿಕೊಂಡರೆ ಆರಂಭದಲ್ಲಿಯೇ ಉತಮ ಚಿಕಿತ್ಸೆ ಆಹಾರಕ್ರಮ ಮತ್ತು ವ್ಯಾಯಾಮ ದಿಂದ ಹತೋಟಿಯಲ್ಲಿ ಬರಬಹುದು ,ಹೆದರದೆ ಕಾಲ ಕಾಲಕ್ಕೆ ಶುಗರ್ ಟೆಸ್ಟ್ ಅಗತ್ಯ ಅಂತ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ರೋ ಅಧ್ಯಕ್ಷ ಪ್ರಸಾದ್ ಭಟ್ ವಹಿಸಿದ್ದರು. ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿ ಅಣ್ಣಯ್ಯ ದಾಸ್, ಶಿಬಿರಾರ್ಥಿಗಳು, ರೋಟರಿ ಸದಸ್ಯರು ಭಾಗಿಯಾಗಿದ್ದರು.ಸುಮಾರು 100 ರಷ್ಟು ಮಧುಮೇಹ ತಪಾಸಣೆ ನಡೆಸಲಾಯಿತು.