ಉಡುಪಿ : ಬಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಜಿಲ್ಲೆ, ಭಜರಂಗಿ ಹಿಂದೂ ಪರಿಷತ್ ಉಡುಪಿ ಜಿಲ್ಲೆ ಮತ್ತು ಮಾಧವ ಪಂಬದ ಅಭಿಮಾನಿ ಬಳಗ ಉಡುಪಿ-ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಪರಿವಾರ ದೈವಗಳ ದೈವಸ್ಥಾನ ವಠಾರವನ್ನು ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ನರಸಿಂಹ ಆಚಾರ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಬ್ಬರ್ಯ ಯುವಸೇವಾ ಸಮಿತಿಯ ಗೌರವ ಅಧ್ಯಕ್ಷರು, ಭಜರಂಗಿ ಹಿಂದೂ ಪರಿಷತ್ ಉಡುಪಿ ಜಿಲ್ಲೆ ಸಂಚಾಲಕರು, ಮಾಧವ ಪಂಬದ ಅಭಿಮಾನಿ ಬಳಗದ ಸಂಚಾಲಕರಾದ ವಿನೋದ್ ಶೆಟ್ಟಿ, ಭಜರಂಗಿ ಹಿಂದೂ ಪರಿಷತ್ ಅಧ್ಯಕ್ಷರಾದ ಸುನಿಲ್ ಮಣಿಪಾಲ್, ಸಂಘಟನೆ ಕಾರ್ಯದರ್ಶಿಯಾದ ವಿಘ್ನೇಶ ಆಚಾರ್ಯ,
ಕೋಶಾಧಿಕಾರಿ ಸಮಿತ್ ಶೆಟ್ಟಿ, ಮೋಹನ್, ದಿನೇಶ್, ಭರತ್, ಮಂಜುನಾಥ್, ಸದಸ್ಯರುಗಳು ಉಪಸ್ಥಿತರಿದ್ದರು.