ಉಡುಪಿ : ಮಹಾತ್ಮಾಗಾಂಧೀಜಿಯವರ 153ನೇ ಜಯಂತಿಯನ್ನು ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಗಾಂಧೀಜಿ ಯವರು ಏನು ಹೇಳಿದ್ದಾರೆ ಅದನ್ನು ಜೀವನದಲ್ಲಿ ಮಾಡಿ ತೋರಿಸಿ ಕೊಟ್ಟಂತಹ ಮಹಾನ್ ವ್ಯಕ್ತಿ, ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಮಹಾತ್ಮ. ಇಂದಿಗೂ ದೇಶ ವಿದೇಶಗಳಲ್ಲಿ ಅವರ ಗುಣಗಾನ ನಡೆಯುತ್ತಿದೆ.
ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರು ಗಾಂಧೀಜಿಯವರ ಆಶಯದಂತೆ ಗ್ರಾಮವಾಸ್ತವ್ಯ ಮಾಡಿ ಅವರ ಆಶಯವನ್ನು ಈಡೇರಿಸಿರುತ್ತಾರೆ. ಅವರ ಆದರ್ಶ ನಮಗೆ ದಾರಿದೀಪವಾಗಿರುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಯೋಗೀಶ್.ವಿ. ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಕಾರ್ಯಧ್ಯಕ್ಷ ವಾಸುದೇವ ರಾವ್, ಜಯಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಗಂಗಾಧರ ಬಿರ್ತಿ, ಯಸ್.ಪಿ ಬರ್ಬೋಜ, ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು , ರಾಮ ರಾವ್,ಆರ್.ಆರ್.ಪುತ್ರನ್, ಜಯಕರ ಶೆಟ್ಟಿಗಾರ್, ಹರಿಣಿ ಬಿ ಕೋಟ್ಯಾನ್, ಹರೀಶ್ ಬಿ ಹೆಗಡೆ, ಹರಿಣಿ ಆರ್ ಕೋಟ್ಯಾನ್,ತಬಸ್ಸುಮ್, ಆರ್. ಎನ್ ಕೋಟ್ಯಾನ್ ಯು.ಎ.ರಶೀದ್ ಮತ್ತಿತರ ಪಕ್ಷ ಕಾರ್ಯಕರ್ತರು ಭಾಗವಹಿಸಿದ್ದರು.