ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸೈಬ್ರಕಟ್ಟೆ ರೋಟರಿ ಕ್ಲಬ್ : ಜಾನುವಾರು ಕಟ್ಟೆ ಶಾಲೆಯಲ್ಲಿ ನೂತನ ಇಂಟ್ರಾಕ್ಟ್ ಕ್ಲಬ್ ಉದ್ಘಾಟನೆ, ಧನಸಹಾಯ, ಸ್ಟೇಷನರಿ ವಿತರಣೆ

Posted On: 02-10-2021 09:34PM

ಉಡುಪಿ : ಸೈಬ್ರಕಟ್ಟೆ ರೋಟರಿಯಿಂದ ಹೊಸ ಇಂಟ್ರಾಕ್ಟ್ ಕ್ಲಬ್ ಜಾನುವಾರು ಕಟ್ಟೆ ಹೈಸ್ಕೂಲ್ ನಲ್ಲಿ ಸ್ಥಾಪಿಸಿ ಅದರ ಉದ್ಘಾಟನೆಯನ್ನು ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ನೆರವೇರಿಸಿದರು.

ಇಂಟ್ರಾಕ್ಟ್ ಕ್ಲಬ್ ನ ಅಧ್ಯಕ್ಷ ಪ್ರಜ್ವಲ್ ಅವರಿಗೆ ಕೊರಳ ಲಾಂಛನ ಹಾಕುವುದರ ಮೂಲಕ ಜಿಲ್ಲಾ ಇಂಟ್ರಾಕ್ಟ್ ಸಭಾಪತಿ ಕೆ ಎಸ್ ಜೈವಿಠಲ್ ಪದ ಪ್ರಧಾನ ಮಾಡಿದರು. ಕಾರ್ಯದರ್ಶಿಯಾಗಿ ಶ್ರೀಶ ಆಯ್ಕೆಗೊಂಡರು.

ಹೊಸ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಈ‌ಸಂದರ್ಭ 10ನೇ ತರಗತಿಯ ಅತಿ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ಪ್ರತಿಭಾ ಸಹಾಯಧನ, ಎಲ್ಲ 116 ವಿದ್ಯಾರ್ಥಿಗಳಿಗೆ N 95 ಮಾಸ್ಕ್ , ಸ್ಟೇಷನರಿ ಕೊಡಲಾಯಿತು. ಶಾಲೆಗೆ 15,000 ರೂ. ನ 6 ಕಂಪ್ಯೂಟರ್ ಟೇಬಲ್ಸ್ ಗಳನ್ನು ಹಸ್ತಾಂತರಿಸಲಾಯಿತು.

ವಿದ್ಯಾರ್ಥಿಗಳಿಗೆ ಕ್ವಿಜ್ ಏರ್ಪಡಿಸಿ ವಿಜೇತರಿಗೆ ಬಹುಮಾನ ಗಳನ್ನು ನೀಡ ಲಾಯಿತು. ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ ,ಜಿಲ್ಲಾ ಇಂಟ್ರಾಕ್ಟ್ ಉಪಸಭಾಪತಿ ಆನಂದ ಶೆಟ್ಟಿ ಕಾರ್ಯದರ್ಶಿ ಅಣ್ಣಯ್ಯ ದಾಸ್ ಇಂಟ್ರಾಕ್ಟ್ ಟೀಚೆರ್ಸ್ ಕೋ ಅರ್ಡಿನೇಟರ್ ಶಿವಪ್ಪ ಸರ್, ಇಂಟ್ರಾಕ್ಟ್ ಕೋ ಅರ್ಡಿನೇಟರ್ ಕಿರಣ್ ಕಾಜ್ರಲ್ಲಿ, ವಾಟರ್ ಅಂಡ್ ಸನಿಟೇಷನ್ ಮಿಷನ್ ಸಂಯೋಜಕ ವಿಜಯಕುಮಾರ್ ಶೆಟ್ಟಿ ಕೆ, ಮುಖ್ಯೋಪಾಧ್ಯಾಯ ರಾಮಕೃಷ್ಣ ನಾಯ್ಕ್ , ಕಾರ್ಯಕ್ರಮದ ಅಧ್ಯಕ್ಷ ಅಧ್ಯಕ್ಷ ಪ್ರಸಾದ್ ಭಟ್ ಉಪಸ್ಥಿತರಿದ್ದು. ಕಾರ್ಯಕ್ರಮವನ್ನು ಅಶೋಕ್ ನಿರೂಪಿಸಿದರು.