ವಾಮದಪದವು : ತುಳುನಾಡ ರಕ್ಷಣಾ ವೇದಿಕೆಯಿಂದ "ತುಳುನಾಡ ಲೇಸ್" ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
Posted On:
05-10-2021 05:20PM
ಮಂಗಳೂರು : ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಆಯೋಜಿಸಿದ "ತುಳುನಾಡ ಲೇಸ್" ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವಾಮದಪದವು ಗಣೇಶ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಕುಡ್ಲ ವಾಹಿನಿ ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ನೆರವೇರಿಸಿದರು. ಯೋಗೀಶ್ ಶೆಟ್ಟಿ ಕಳಸಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾದ ಮುರಳಿ ಕೃಷ್ಣ ರಾವ್ , ಗಾಯಕಿ ಕ್ಷಿತಿ. ಕೆ ರೈ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ರಾಜ್ಯ ರಾಜ್ಯ ನಗರ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಮಂಡಳಿ ನಿರ್ದೇಶಕರಾದ ಸುಲೋಚನಾ ಜಿ. ಕೆ ಭಟ್, ಚೆನ್ನೈತೋಡಿ ಗ್ರಾ ಪಂ. ಅಧ್ಯಕ್ಷರಾದ ಭಾರತಿ ರಾಜೇಂದ್ರ ಪೂಜಾರಿ, ಕುಕ್ಕಿಪಾಡಿ ಗ್ರಾ. ಪಂ ಉಪಾಧ್ಯಕ್ಷರಾದ ಯೋಗೀಶ್ ಆಚಾರ್ಯ, ವಾಮದಪದವು ವ್ಯ.ಸ. ಬ್ಯಾಂಕ್ ಇದರ ಅಧ್ಯಕ್ಷರಾದ ಕಮಲ್ ಶೆಟ್ಟಿ ಬೊಳ್ಳಾಜೆ, ಉದ್ಯಮಿ ವಸಂತ ಶೆಟ್ಟಿ ಕೇದಗೆ, ನಾಡ ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಜ ಲೋಡಿ, ಬೀಡಿ ಕಾಂಟ್ರಾಕ್ಟರ್ ನಜೀರ್ ಸಾಹೇಬ್, ತೆಂಗು ಬೆಳೆಗಾರರ ಸ.ಅಧ್ಯಕ್ಷರಾದ ವಿಜಯ ರೈ ಆಲದಪದವು, ವಾಮದಪದವು ಹಾಲು ಉ. ಸಂ. ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ಉದ್ಯಮಿ ಶ್ರೀಧರ ಪೈ ವಾಮದ ಪದವು, ವ್ಯ.ಸ ಸಂಘ ವಾಮದಪದವು ಮಾಜಿ ನಿರ್ದೇಶಕರಾದ ರಿಚ್ಚರ್ಡ್ ಡಿಸೋಜ, ಮಹಿಳಾ ಸೊಸೈಟಿ ವಾಮದಪದವು ಇದರ ಅಧ್ಯಕ್ಷರಾದ ರೇವತಿ ಮಂಜುನಾಥ ನಾಯಕ್, ಸಮಷ್ಟಿ ಸೌಹಾರ್ದ ಸ. ನಿರ್ದೇಶಕರಾದ ಅಶ್ವತ್ ರೈ. ಉದ್ಯಮಿ ರಫೀಕ್ ವಾಮದಪದವು ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷರಾದ ದೇವಿ ಪ್ರಸಾದ್ ಪ್ರಸ್ತಾವನೆ ಗೈದರು, ಸೌಕತ್ ಆಲಿ ಸ್ವಾಗತಿಸಿದರು. ಲಾದ್ರು ಮೆನೇಜಸ್ ವಂದಿಸಿದರು.
ವೇದಿಕೆಯಲ್ಲಿ ಆನ್ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾದ ಟಾಪ್ 10 ಸ್ಪರ್ದಿಗಳ ತುಳುನಾಡ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ತುರವೇ ಸ್ಥಾಪಕಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಿದ್ದರು. ತುಳು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ, ಆಟಿ ವಿಶೇಷತೆಯ ಬಗ್ಗೆ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸರ್ ಮಾತನಾಡಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಮಾಜಿ ಸಚಿವರಾದ ರಮಾನಾಥ ರೈ,
ಕೆಡಿಪಿ ಸದಸ್ಯ ಚಂದ್ರಶೇಖರ ಶೆಟ್ಟಿ, ಬಂಟ್ವಾಳ ವರ್ತಕರ ವಿ. ಸಂ. ಅಧ್ಯಕ್ಷರಾದ ಎಂ. ಶುಭಾಶ್ಚಂದ್ರ ಜೈನ್, ಮೋಹನ್ ಶೆಟ್ಟಿ ನರ್ವಲ್ದಡ್ಕ, ಶಶಾಂಕ್ ಇಂಡಸ್ಟ್ರಿ ಮಾಲಕರಾದ ಹರೀಂದ್ರ ಪೈ, ಕುಕ್ಕಿಪಾಡಿ ಪಂ. ಅಧ್ಯಕ್ಷರಾದ ಸುಜಾತಾ ಆರ್. ಪೂಜಾರಿ, ಉದ್ಯಮಿ ಹಂಝ ಬಸ್ತಿಕೋಡಿ, ಉದ್ಯಮಿ ಸಂದೀಪ್ ಶೆಟ್ಟಿ, ಕಿಯೋನಿಕ್ಸ್ ಕಂಪ್ಯೂಟರ್ ನ ಗೀತಾ ಜೈನ್, ಬೇಬಿ ಕುಂದರ್, ಕೆ ವಿವೇಕಾನಂದ ರಾವ್, ಉಪಸ್ಥಿತರಿದ್ದರು.
ಆನ್ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾದ ಟಾಪ್ ಟೆನ್ ಸ್ಪರ್ದಿಗಳನ್ನು ಅಭಿನಂದಿಸಿ ವಿಜೇತರಾದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು.
ಕೋವಿಡ್ ಸಂಕಷ್ಟ ಕಾಲದಲ್ಲಿ ಶ್ರಮವಹಿಸಿ ಕೊರೋನ ನಿಯಂತ್ರಣದಲ್ಲಿ ಹೋರಾಡಿದ ಆಶಾಕಾರ್ಯಕರ್ತರನ್ನು ಗೌರವಿಸಲಾಯಿತು.
ಪ್ರದೀಪ್ ಕುಕ್ಕಿಪಾಡಿ ಸ್ವಾಗತಿಸಿ, ದೇವಿಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.