ಸಹಾಯ ಹಸ್ತದ ನಿರೀಕ್ಷೆಯಲ್ಲಿ ಅನಿಲ್ ಪೂಜಾರಿ
Posted On:
11-10-2021 12:34PM
ಕಾಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ನಿವಾಸಿ 32 ವರ್ಷದ ಅನಿಲ್ ಪೂಜಾರಿ ಸುಮಾರು 15ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ತನ್ನ ಎರಡೂ ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಇದೀಗ ಗಾಲಿಕುರ್ಚಿಯ ಆಸರೆಯನ್ನು ಪಡೆದು ಬದುಕುತ್ತಿದ್ದಾರೆ.
ನಾಲ್ವರು ಮಕ್ಕಳಲ್ಲಿ ಹಿರಿಯವರಾದ ಅನಿಲ್ ಪೂಜಾರಿಯವರ ಶಸ್ತ್ರಚಿಕಿತ್ಸೆಗೆ ಸುಮಾರು 12ರಿಂದ 15ಲಕ್ಷಗಳ ವರೆಗೆ ಖರ್ಚಾಗಬಹುದೆಂದು ವೈದ್ಯರು ತಿಳಿಸಿದ್ದು, ಬಡ ಕುಟುಂಬದವರಾದ ತಮಗೆ ಅಷ್ಟು ಹಣ ಹೊಂದಿಸುವ ಶಕ್ತಿ ಇಲ್ಲದೆ ಇರುವುದರಿಂದ ಸಹೃದಯ ದಾನಿಗಳ ನೆರವನ್ನು ಕೋರುವ ಸಲುವಾಗಿ ಪತ್ರಿಕಾ ಪ್ರಕಟಣೆಗಾಗಿ ಮನವಿ ಮಾಡಿರುತ್ತಾರೆ.
ದಾನಿಗಳು RAJANI, Canara Bank Mudarangadi Branch, A/c. 0638101009850, IFSC Code: CNRB0000638 ತೆ ಹಣವನ್ನು ಜಮಾ ಮಾಡಿ ನೆರವಾಗಬಹುದು. ಮೊಬೈಲ್ : 8197576815, 9632951506