ಕಾಪು ಯುವ ಕಾಂಗ್ರೆಸ್ ವತಿಯಿಂದ ಯುವ ಸ್ಪರ್ಶ ಕಾರ್ಯಕ್ರಮಕ್ಕೆ ಚಾಲನೆ, ಭಿತ್ತಿ ಪತ್ರ ಬಿಡುಗಡೆ
Posted On:
18-10-2021 09:49AM
ಕಾಪು : ಗ್ರಾಮೀಣ ಕಾಂಗ್ರೆಸ್ ಮತ್ತು ಗ್ರಾಮೀಣ ಯುವ ಕಾಂಗ್ರೆಸ್ ಸಹಕಾರದಿಂದ ಗ್ರಾಮೀಣ ಮಟ್ಟದಲ್ಲಿ ಯುವಕರನ್ನು ಒಗ್ಗೂಡಿಸಿ ಸರಕಾರದಿಂದ ಸವಲತ್ತುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ಸ್ವಚ್ಚತಾ ಕಾರ್ಯಕ್ರಮ, ರಕ್ತದಾನ ಶಿಬಿರ, ಯುವಜನತೆಗೆ ಕ್ರೀಡಾ ಕೂಟ ಹಾಗು ಸಾಂಸ್ಕೃತಿಕ ಸ್ಪರ್ಧೆ, ಅರೋಗ್ಯ ತಪಾಸಣಾ ಶಿಬಿರ , ಮತದಾರರ ಪಟ್ಟಿ ಗೆ ನೂತನ ಮತದಾರರ ಸೇರ್ಪಡೆ ಮತ್ತು ತಿದ್ದುಪಡಿ, ಹಾಗು ಗ್ರಾಮದ ಅಭಿವೃದ್ಧಿ ಯ ಬಗ್ಗೆ ಸಮಾಲೋಚನೆ ಸಭೆಗಳನ್ನು ನಡೆಸುವುದು ಮೂಲಕ ಇಂತಹ ವಿನೂತನ ಯೋಜನೆ ಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತ ರು ಗ್ರಾಮದ ಮಟ್ಟದ ಪಕ್ಷದ ವರ್ಚಸ್ಸು ಇನ್ನೂ ಷ್ಟು ಬಲಪಡಿಸುವುದರ ಜೊತಗೆ ಸಂಘಟನಾತ್ಮಕ ಕೆಲಸ ಕಾರ್ಯ ಗಳನ್ನು ಮಾಡಬೇಕಾಗಿದೆ. ಜನರಿಗೆ ಅಗತ್ಯ ಸೇವೆಯನ್ನು ನೀಡುವ ಮೂಲಕ ಗ್ರಾಮದ ಅಭಿವೃದ್ಧಿ ಗೆ ಯುವ ಸ್ಪರ್ಶವನ್ನು ನೀಡುವುದರೊಂದಿಗೆ ಯುವಕರಿಗೆ ಸಮಾಜಿಕ ಕೆಲಸ ಕಾರ್ಯ ಮೂಲಕ ಪಕ್ಷ ಸಂಘಟನೆಯ ಮಾಡುವ ಕಾರ್ಯ ಯಶ್ವಸಿಯಾಗಲಿ ಎಂದು ಕೆಪಿಸಿಸಿ ಕೊ- ಅರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ ಹೇಳಿದರು.
ಅವರು ಕಾಪು ಯುವ ಕಾಂಗ್ರೆಸ್ ವತಿಯಿಂದ ಕಾಪು ರಾಜೀವ್ ಭವನದಲ್ಲಿ ಯುವಕರ ನಡೆ ಗ್ರಾಮದ ಅಭಿವೃದ್ಧಿ ಕಡೆ ಎಂಬ ಧ್ಯೇಯ ವಾಕ್ಯದಂತೆ ಕಾಪು ಕ್ಷೇತ್ರದ ಗಾಮೀಣ ಮಟ್ಟದಲ್ಲಿ ನಡೆಸುವ ವಿನೂತನ ಯೋಜನೆ ಯುವ ಸ್ಪರ್ಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಗಾಮೀಣ ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡವರಿಗೆ ಆದೇಶ ಪತ್ರವನ್ನು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಡ್ವೆ ವಿತರಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ಸಿಗೆ ವಿಜ್ಞೇಶ್ ಆಚಾರ್ಯ ನೂತನವಾಗಿ ಸೇರ್ಪಡೆಗೊಂಡರು ಅವರನ್ನು ಪಕ್ಷದ ಶಾಲು ಹಾಕಿ ಬರಮಾಡಿಕೊಳ್ಳಲಾಯಿತು.
ಕೆಪಿಸಿಸಿ ಕೊ- ಅರ್ಡಿನೇಟರ್ ದೇವಿಪ್ರಸಾದ್ ಶೆಟ್ಟಿ ಯುವ ಕಾಂಗ್ರೆಸ್ ಸದಸ್ಯರಿಗೆ ಗುರುತು ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೆಲ್ವಿನ್ ಡಿಸೋಜ, ಕೆಪಿಸಿಸಿ ಕೊ- ಅರ್ಡಿನೇಟರ್ ಅಬ್ದುಲ್ ಅಜೀಜ್ ಹೆಜಮಾಡಿ, ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಕ್ , ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾದ ಸುಲಕ್ಷಣ್ ಪೂಜಾರಿ, ಇರ್ವಿನ್ ಸೋನ್ಸ್, ಜಗದೀಶ್ , ಅಶ್ವಿನಿ ಬಂಗೇರ , ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್ ನಿರೂಪಿಸಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಮುದರಂಗಡಿ ವಂದಿಸಿದರು.