ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರೋಟರಿ ಸೈಬ್ರಕಟ್ಟೆಯ ವತಿಯಿಂದ ರೋಟರಿ ಮಾಜಿ ಸಹಾಯಕ ಗವರ್ನರ್ ಗಳ ಸಮಾಗಮ ಕಾರ್ಯಕ್ರಮ, ಸನ್ಮಾನ

Posted On: 18-10-2021 07:36PM

ಉಡುಪಿ : ರೋಟರಿ ಸೈಬ್ರಕಟ್ಟೆಯ ವತಿಯಿಂದ ರೋಟರಿ ಮಾಜಿ ಸಹಾಯಕ ಗವರ್ನರ್ ಗಳ ಸಮಾಗಮ ಕಾರ್ಯಕ್ರಮವು ರೋಟರಿ ಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ 7 ಮಾಜಿ ಸಹಾಯಕ ಗವರ್ನರುಗಳಾದ ದೇವಿದಾಸ ಶೆಟ್ಟಿಗಾರ್, ಚೇರ್ಕಾಡಿ ಅಶೋಕ್ ಕುಮಾರ್ ಶೆಟ್ಟಿ, ಚಂದ್ರ ನಾ, ಮೋಹನ್ ದಾಸ್ ಪೈ, ಆತ್ರಾಡಿ ದಿನೇಶ್ ಹೆಗ್ಡೆ, ಮಹೇಶ್ ಕುಮಾರ್, ಅಶೋಕ್ ಕುಮಾರ್ ಶೆಟ್ಟಿ ಮಟ್ಪಾಡಿ ಇವರುಗಳನ್ನು ಒಂದೇ ವೇದಿಕೆಯಲ್ಲಿ ವಲಯ 3 ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಅವರು ಈ ಸಾಲಿನ ವಲಯ ಸೇನಾನಿಗಳಾದ ವಿಜಯ ಕುಮಾರ್ ಶೆಟ್ಟಿ, ಬ್ರಾನ್ ಡಿ ಸೋಜ ಜೊತೆಗೂಡಿ ಅಥಿತಿಗಳನ್ನು ಸನ್ಮಾನಿಸಿದರು.

ಎಲ್ಲ 7 ಮಾಜಿ ಸಹಾಯಕ ಗವರ್ನರ್ ಗಳು ಮಾತನಾಡಿ ಅಣ್ಣಯ್ಯ ದಾಸ್ ಅವರ ಕೊಡುಗೆ ರೋಟರಿಗೆ ಅಪಾರವಾಗಿದ್ದು ನಿರಂತರ ಸೇವೆ ಗಳ ಮೂಲಕ ಗುರುತಿಸಿಕೊಂಡಿದ್ದಾರೆ ಹಾಗೂ ಈ ವರ್ಷ ರೋಟರಿ ಸೈಬ್ರಕಟ್ಟೆ ಹಲವು ಸೇವಾ ಪ್ರಾಜೆಕ್ಟ್ ಗಳ ಮೂಲಕ ರೋಟರಿ ಜಿಲ್ಲೆಯಲ್ಲೇ ಅತ್ಯುತ್ತಮವಾಗಿ ಗುರುತಿಸಿ ಕೊಂಡಿದ್ದಲ್ಲದೆ ಇನ್ನೂ ಮುಂದೆಯೂ ಸೇವಾ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡಿ ಅಂತ ಶ್ಲಾಘನೀಯ ನುಡಿಗಳನ್ನಾಡಿದರು.ಅಲ್ಲದೆ ಸೇವಾ ಕಾರ್ಯದಲ್ಲಿ ತಮ್ಮ ಬೆಂಬಲ ಕೂಡ ನೀಡುವುದಾಗಿ ಹೇಳಿದರು. ಪದ್ಮನಾಭ್ ಕಾಂಚನ್ ಅವರು ಮಾತನಾಡಿ ಇದೊಂದು ಅಭೂತ ಪೂರ್ವ ಕಾರ್ಯಕ್ರಮ ವಾಗಿದ್ದು ರೋಟರಿ ಸೈಬ್ರಕಟ್ಟೆಯ ಕಾರ್ಯವೈಖರಿ ಹಾಗೂ ಸದಸ್ಯರ ಭಾಗವಹಿಸುವಿಕೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ವಹಿಸಿದ್ದರು. ಈ‌ ಸಂದರ್ಭ ಮಾತನಾಡಿದ ಅವರು ಅತಿಥಿಗಳು ನಮ್ಮ ರೋಟರಿ ಕ್ಲಬ್ ಬಗ್ಗೆ ಆಡಿದ ಶ್ಲಾಘನೀಯ ಮಾತಿನಿಂದ ಕ್ಲಬ್ ಗೆ ಜವಾಬ್ದಾರಿ ಹೆಚ್ಚಾಗಿದ್ದು ಇನ್ನೂ ಮುಂದೆಯೂ ಕೂಡ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ನುಡಿದರು. ವರದರಾಜ್ ಶೆಟ್ಟಿ ನಿರೂಪಿಸಿ, ಅಣ್ಣಯ್ಯದಾಸ್ ವಂದಿಸಿದರು.