ಉಡುಪಿ : ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ.), ಪರ್ಕಳ ಇದರ ವಿಂಶತಿ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 31 ಅಪರಾಹ್ನ 1:30 ರಿಂದ ನರಸಿಂಹ ಸಭಾಭವನದಲ್ಲಿ ಯಕ್ಷಲೋಕ ವಿಜಯ ಎಂಬ ಯಕ್ಷಗಾನ ಬಯಲಾಟ ಜರಗಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಹಿಲ್ಲೂರು, ಮೂಡುಬೆಳ್ಳೆ, ಮದ್ದಳೆ ಪರಮೇಶ್ವರ ಭಂಡಾರಿ, ಚಂಡೆ ಗಣೇಶ ಗಾಂವರ್, ಮುಮ್ಮೇಳದಲ್ಲಿ ಸ್ತ್ರೀ ಪಾತ್ರ ಹೆನ್ನೆಬೈಲು, ಉಳ್ಳೂರು, ಮಾರುತಿ ಬೈಲಗದ್ದೆ
ಹಾಸ್ಯ ಪಾತ್ರದಲ್ಲಿ ಸಿದ್ಧಾಪುರ, ಕಾಸರಕೋಡು, ಪುರುಷ ಪಾತ್ರದಲ್ಲಿ ತೀರ್ಥಹಳ್ಳಿ, ಥಂಡಿಮನೆ, ನೀಳ್ಕೊಡು, ವಿನಯ್ ಬೇರೊಳ್ಳಿ, ಕಾರ್ತಿಕ್ ಕಣ್ಣಿ ವೇಷ ಭೂಷಣವನ್ನು ಲಕ್ಷ್ಮಣ ನಾಯ್ಕ, ಮಂಕಿ
ಮತ್ತು ವಿಶೇಷ ಆಕರ್ಷಣೆಯಾಗಿ ರಂಗದಲ್ಲಿ ಪರಮೇಶ್ವರ ಭಂಡಾರಿಯವರಿಂದ ಪಂಚ ಮದ್ದಳೆ ನಿನಾದ ಮೊಳಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.