ಇದೀಗ ಬ್ರಹ್ಮಾವರದಲ್ಲಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನವರ ಫ್ರೆಡ್ಡೀಸ್ ರೆಸ್ಟ್ರೋ ಕೆಫೆ ಶುಭಾರಂಭ
Posted On:
28-10-2021 02:55PM
ಉಡುಪಿ : ದುಬೈನಲ್ಲಿ ಜನಪ್ರಿಯತೆ ಪಡೆದಿರುವ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನವರ ನೂತನ ಶಾಖೆ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಆರಂಭಗೊಳ್ಳುತ್ತಿದೆ. ಉಡುಪಿಯ ಬ್ರಹ್ಮಾವರದಲ್ಲಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನವರ ಫ್ರೆಡ್ಡೀಸ್ ರೆಸ್ಟ್ರೋ ಕೆಫೆ, ಸ್ಪೋಟ್ಸ್ ಬಾರ್ ಗ್ರಾಹಕರ ಅಭಿರುಚಿಯನ್ನು ಪೂರೈಸಲು ಅ.28, ಗುರುವಾರ ಆರಂಭಗೊಳ್ಳಲಿದೆ
ಉಡುಪಿ ಜಿಲ್ಲೆಯ ಬ್ರಹ್ಮಾವರದ ಫಾರ್ಚೂನ್ ಪ್ಲಾಝಾ ಹೋಟೆಲ್ ನಲ್ಲಿ ಶುಭಾರಂಭಗೊಳ್ಳಲಿರುವ ನೂತನ ಶಾಖೆಗೆ ಕನ್ನಡದ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಿಷಭ್ ಶೆಟ್ಟಿ, ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ, ಮತ್ತು ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಪ್ರಮೋದ್ ಶೆಟ್ಟಿ ಶುಭಹಾರೈಸಿದ್ದಾರೆ.
ಫ್ರೆಡ್ಡೀಸ್ ವಿಶೇಷ : ರೆಸ್ಟ್ರೋ ಕೆಫೆಗೆ ಬರುವವರಿಗೆ ಅನುಕೂಲ ಹಾಗೂ ಆರಾಮದಾಯಕ ಅನುಭವ ನೀಡುವಂತಹ ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ವ್ಯವಸ್ಥೆಯನ್ನು ಈ ಹೋಟೆಲ್ ಹೊಂದಿದ್ದು, ಅತ್ಯುತ್ತಮವಾದ ಒಳಾಂಗಣ ವಿನ್ಯಾಸ, ಬಾಯಲ್ಲಿ ನೀರೂರಿಸುವ ಕರಾವಳಿ ವಿಶೇಷ ಖಾದ್ಯಗಳು, ಫ್ರೆಡ್ಡೀಸ್ ಕ್ರೀಡಾ ಪ್ರೇಮಿಗಳಿಗೆ ಬಿಗ್ ಸ್ಕ್ರೀನ್ ಮೂಲಕ ಐಸಿಸಿ ಟಿ-20 ವರ್ಲ್ಡ್ ಕಪ್ ಗಳನ್ನು ಲೈವ್‌ನಲ್ಲಿ ವೀಕ್ಷಣೆ ಮಾಡಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಗಳು ದುಬೈನಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದು ಖಾಸಗಿ ಒಡೆತನದ ಹೋಟೆಲ್ ಕಂಪನಿಯಾಗಿದೆ. ಈ ಪ್ರದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿಥ್ಯ ಗುಂಪುಗಳಲ್ಲಿ ಒಂದಾಗಿದೆ. ದುಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಂಪನಿಯು ತನ್ನ ಮೊದಲ ಹೋಟೆಲ್ ಅನ್ನು 2001ರಲ್ಲಿ ಸ್ಥಾಪಕ ಅಧ್ಯಕ್ಷರಾದ ಯಶಸ್ವಿ ಉದ್ಯಮಿ ಪ್ರವೀಣ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡು ನಂತರ ಫಾರ್ಚೂನ್ ಗ್ರೂಪ್ ಅಭೂತಪೂರ್ವವಾಗಿ ವಿಸ್ತರಣೆ ಹೊಂದುತ್ತಲೇ ಇದೆ. ಇದೀಗ ಪ್ರವೀಣ್ ಶೆಟ್ಟಿಯವರ ಕನಸಿನಂತೆ ತಾಯ್ತಾಡಲ್ಲು ಈ ಸಂಸ್ಥೆ ತನ್ನ ಶಾಖೆಯನ್ನು ವಿಸ್ತರಿಸುತ್ತಿರುವುದು ಗ್ರಾಹಕರಿಗೆ ಸಂತಸ ನೀಡಿದೆ. ಫಾರ್ಚೂನ್ ಗ್ರೂಪ್ ಈಗಾಗಲೇ ದುಬೈ, ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್), ಟಿಬಿಲಿಸಿ (ಜಾರ್ಜಿಯಾ) ಮತ್ತು ಕರ್ನಾಟಕ (ಭಾರತ)ದಲ್ಲಿ ಹೋಟೆಲ್‌ಗಳನ್ನು ಹೊಂದಿದೆ.
ಫಾರ್ಚೂನ್ ಗ್ರೂಪ್ ಹೋಟೆಲ್ಸ್ : ಬಾರ್ ದುಬೈಯ ಫಾರ್ಚೂನ್ ಏಟ್ರಿಯಮ್ ಹೋಟೆಲ್ (4.ಸ್ಟಾರ್), ದುಬೈನ ಫಾರ್ಚೂನ್ ಪಾರ್ಕ್ ಹೋಟೆಲ್, ದುಬೈ ಇನ್ವೆಸ್ಟೆಂಟ್ಸ್ ಪಾರ್ಕ್ (4 ಸ್ಟಾರ್), ಫಾರ್ಚೂನ್ ಕರಾಮಾ ಹೋಟೆಲ್, ದುಬೈ (3 ಸ್ಟಾರ್), ದುಬೈ ಗ್ರಾಂಡ್ ಹೋಟೆಲ್ ಬೈ ಫಾರ್ಚೂನ್, ಅಲ್ ಕುಸೈಸ್, ದುಬೈ (4 ಸ್ಟಾರ್), ಫಾರ್ಚೂನ್ ಪ್ಲಾಜಾ ಹೋಟೆಲ್, ಅಲ್ ಕುಸೈಸ್, ದುಬೈ - 3 ಸ್ಟಾರ್ ಫಾರ್ಚೂನ್ ಹೋಟೆಲ್ ಡೇರಾ, ದುಬೈ(3 ಸ್ಟಾರ್), ಫಾರ್ಚೂನ್ ಪ್ಯಾಲೇಸ್ ಹೋಟೆಲ್, ಟಿಬಿಲಿಸಿ (4 ಸ್ಟಾರ್), ಉಡುಪಿಯ ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್ (4 ಸ್ಟಾರ್), ಕುಂದಾಪುರದ ವಕ್ವಾಡಿಯ ಫಾರ್ಚೂನ್ ವಿಲೇಜ್ ಹೋಟೆಲ್ (3 ಸ್ಟಾರ್).