ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ, ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ದೇವರ ಬಲಿ ಉತ್ಸವ
Posted On:
28-10-2021 10:34PM
ಕಾರ್ಕಳ : ಕಾರ್ಕಳ ತಾಲೂಕಿನ ಎಳ್ಳಾರೆ ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ
ನವೆಂಬರ್ 14ರ ಪೂರ್ವಾಹ್ನ ಗಂಟೆ 9.00ಕ್ಕೆ ಶ್ರೀ ದೇವರಿಗೆ ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಮಧ್ಯಾಹ್ನ 1ಗಂಟೆಯಿಂದ ಅನ್ನಸಂತರ್ಪಣೆ ಜರಗಲಿದೆ.
ಸೇವಾರ್ಥಿಗಳಾದ ಪುರಂದರ ಬಿ. ಪೂಜಾರಿ, ಪಂಚಮಿ ದೊಂಡೇರಂಗಡಿಯವರ ಕೊಡುಗೆಯಾದ ಸೇವಾ ಕೌಂಟರ್ ಸಮರ್ಪಣೆಯು ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಸಂಜೆ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ.
ನವೆಂಬರ್ 18 ಗುರುವಾರ ಸಂಜೆ ಗಂಟೆ 6.30ರಿಂದ ದೀಪಾರಾಧನೆಯು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.