ಕಾಪು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ಪುಸ್ತಕ 'ಸೊಡರ ಹಬ್ಬ' ಬಿಡುಗಡೆಗೊಂಡಿತು.
ದೇವಳದ ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ ಸೊಡರ ಹಬ್ಬವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಸೊಡರ ಹಬ್ಬ (ದೀಪಾವಳಿ,ಗೋಪೂಜೆ, ತುಳಸಿಪೂಜೆ,ಲಕ್ಷದೀಪ) ಪುಸ್ತಕದಲ್ಲಿ
ಬಲೀಂದ್ರ ಬರುತ್ತಾನೆ ’ಹಣತೆ’ ಹಚ್ಚೋಣ,
ಬಂದು ಹೋಗುವ ಬಲೀಂದ್ರನಿಗೆ ಬಹುಪರಾಕು,
ಪೊಲಿ ಹಬ್ಬ, ಸೊಡರ ಹಬ್ಬಕ್ಕೆ ಸೊಬಗಿನ ಸೋಬಾನೆ,
ಸಮೃದ್ಧಿಯ ಸಮುಲ್ಲಾಸ, ಸೊಬಗು ಸೊರಗಿದ ಸೊಡರ ಹಬ್ಬ, ದೀಪಾವಳಿಗಿಲ್ಲ ಕೃಷಿಯ ಸೊಂಪು,
ಕ್ಷಮಿಸು ಬಲೀಂದ್ರ/ಮಾಪಿ ನಟ್ಟೊಂದು ಬಲೀಂದ್ರಗ್ ಲೆಪ್ಪು, ನಿಸರ್ಗ ನೀರೆಗೆ ನೀರಾಜನ, ಬಲೀಂದ್ರೆ ಬರ್ಪೆ ಪೊಲಿ ಕೊರ್ಪೆ (ತುಳು ಲೇಖನ), ಗೋಪೂಜೆಯ ಆಶಯ, ತುಳಸಿ ಕಟ್ಟೆಗೆ ಬಲಬಂದು, ಉಬತ್ಥಾಪನಾ ಆಚರಣೆ, ಎಲ್ಲೂರಿನ ದೀಪೋತ್ಸವ, ಲಕ್ಷ್ಯ ಬೆಳಗುವ ಲಕ್ಷದೀಪೋತ್ಸವ ಮುಂತಾದ ಲೇಖನಗಳಿದ್ದು ಹಾಗೂ
ನಂದೊಳ್ಗೆ ಅಮುಣಿಂಜೆಗುತ್ತು ಶೀನಪ್ಪ ಹೆಗ್ಡೆ ಅವರು ೫೨ ಸಂಗ್ರಹಿಸಿ ೧೯೫೨ರಲ್ಲಿ ಪ್ರಕಟಿಸಿದ ’ತುಳುವಾಲ ಬಲಿಯೇಂದ್ರೆ’ ಪಾರ್ದನದ ಕೊನೆಯ ಭಾಗವನ್ನು ಸೇರಿಸಿಕೊಳ್ಳಲಾಗಿದೆ.
ದೇವಳದ ಆಡಳಿತಾಧಿಕಾರಿ ಮಮತಾ ವೈ ಶೆಟ್ಟಿ , ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವರಾಜ ರಾವ್ , ಪುಣೆ ಉದ್ಯಮಿ ಎರ್ಮಾಳು ನಾರಾಯಣ ಕೆ.ಶೆಟ್ಟಿ, ಸಂಜೀವ ಶೆಟ್ಟಿ , ನಿವೃತ್ತ ಪಾಂಶುಪಾಲ ಸುದರ್ಶನ ವೈ.ಎಸ್.ನಾಗರಾಜ ಉಡುಪ , ಶ್ರೀಧರ ಮಂಜಿತ್ತಾಯ ,ದುರ್ಗಾ ಮಿತ್ರಮಂಡಳಿ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ದೇವಳದ ಪ್ರಬಂಧಕ ರಾಘವೇಂದ್ರ ಶೆಟ್ಟಿ , ಸತೀಶ ಕುಂಡಂತಾಯ, ಭಾರ್ಗವ ಕುಂಡಂತಾಯ ಉಪಸ್ಥಿತರಿದ್ದರು.