ಮಂಗಳೂರು : ಮುತ್ತೂಟ್ ಫೈನಾನ್ಸ್ ತನ್ನ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯೋತ್ಸವದ ಸಲುವಾಗಿ ಉಳ್ಳಾಲ ಬೀಚ್ ನಲ್ಲಿ ಪ್ಲಾಸ್ಟಿಕ್ ಕಲೆಕ್ಷನ್ ಡ್ರೈವ್ ಜರಗಿತು.
ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಬಾಟಲಿ ಹಾಗು ಇತರ ಪ್ಲಾಸ್ಟಿಕ್ ವಸ್ತು ಗಳು ಕಾಗದ, ಫೋಮ್, ಚಪ್ಪಲ್ ಇತ್ಯಾದಿ ಸಂಗ್ರಹಿಸಿ ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆ ಹಾಗು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರ ಮೂಲಕ ವಿಲೇವಾರಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಒಟ್ಟು 30 ಕ್ಕಿಂತಲೂ ಹೆಚ್ಚು ಮುತ್ತೂಟ್ ಫೈನಾನ್ಸ್ ಮಂಗಳೂರಿನ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಂಗಳೂರು ರಿಜನ್ ನ ರೀಜನಲ್ ಮ್ಯಾನೇಜರ್ ಉದಯ್ ಶ್ಯಾಮ್ ಖಂಡಿಗೆ, ಕ್ಲಸ್ಟರ್ ಮ್ಯಾನೇಜರ್ ಸುರೇಶ ಉಚ್ಚಿಲ್, ರೀಜನಲ್ ಆಫೀಸ್ ನಿಂದ ರಾಹುಲ್ ರಾಘವನ್, ಮೋನಿಷಾ ಕಿರಣ್ ಕುಮಾರ್, ರಮೀಜ್, ಬ್ರಾಂಚ್ ಮ್ಯಾನೇಜರ್ ಪವಿತ್ರ, ಚಂದ್ರಶೇಖರ್, ಯು ಸಿ ಎಸ್ ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.