ಕಾಪು : ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ
ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಎಂ.ಬಿ.ಪುರಾಣಿಕ್ ಮಜೂರು ಅವಿರೋಧವಾಗಿ ಮುಂದಿನ 2021-23ರ ಅವಧಿಗೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶೇಖರ ಶೆಟ್ಟಿ, ಕೋಶಾಧಿಕಾರಿಯಾಗಿ ಸುಲಕ್ಷಣ್ ಎಲ್. ಕುಮಾರ್, ದೇಗುಲ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸುಬ್ರಹ್ಮಣ್ಯ ಭಟ್, ಜೀವನ್ ಪ್ರಕಾಶ್ ಶೆಟ್ಟಿ, ಪ್ರಶಾಂತ್ ಮಜೂರು, ಪ್ರಸನ್ನ ಶೆಟ್ಟಿ, ಸುಮತಿ ದೇವಾಡಿಗ, ಶುಭವತಿ ಪೂಜಾರಿ ಆಯ್ಕೆಯಾಗಿದ್ದಾರೆ.