ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುರ್ಕಾಲು : ದಿ! ಸಿಸಿಲಿಯ ಆಳ್ವ ಸ್ಮಾರಕ ಬಸ್ ನಿಲ್ದಾಣ ಲೋಕಾರ್ಪಣೆ

Posted On: 05-11-2021 11:40AM

ದಿವಂಗತ ಸಿಸಿಲಿಯಾ ಆಳ್ವ ಸ್ಮಾರಕ ಬಸ್ ನಿಲ್ದಾಣ ದಿನಾಂಕ 04/11/21ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸುಭಾಸ್ ನಗರದಲ್ಲಿ ಲೋಕಾರ್ಪಣೆಗೊಂಡಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಂಕರಪುರ ಚರ್ಚಿನ ಧರ್ಮಗುರು ರೆವರೆಂಡ್ ಫಾದರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಆಶೀರ್ವಚಿಸಿದರು. ದಾನಿಗಳಾದ ಫಿಲೋಮಿನ ಆಳ್ವಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.

ಕುರ್ಕಾಲು ಗ್ರಾಮದ ಪ್ರಥಮ ಪ್ರಜೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ ಶೆಟ್ಟಿ ಬಿಳಿಯಾರು ಅವರು ದೀಪ ಬೆಳಗುವುದರ ಮೂಲಕ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ನಾಗರಿಕ ಸಮಿತಿ ಸರಕಾರಿಗುಡ್ಡೆ ಅಧ್ಯಕ್ಷರಾದ ಆ್ಯಂಟನಿ ಡೇಸಾ, ಕಟಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬೂಬಕರ್ ಎ ಆರ್, ನವೀನ್ ಅಮೀನ್ ಶಂಕರಪುರ 'ನಿವೃತ್ತ ಮುಖ್ಯೋಪಾಧ್ಯಾಯರಾದ ಮೋಹನ್ ದಾಸ್ ಶೆಟ್ಟಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಕುರ್ಕಾಲು ಗ್ರಾ.ಪಂ ಉಪಾಧ್ಯಕ್ಷೆ ಸಿಮ್ಮಿ ಮಾರ್ಗರೇಟ್ ಡಿಸೋಜಾ ಕುರ್ಕಾಲು ಗ್ರಾ. ಪಂ ಅಧ್ಯಕ್ಷೆ ಶೋಭಾ ಸಾಲಿಯಾನ್, ಫೆಲೋ ಟೈಮ್ ಸಿಸ್ಟರ್ಸ್ ಉದ್ಯಾವರ, ಗಣ್ಯರಾದ ಶಿವಾನಂದ, ಬಶೀರ್ ಸಾಹೇಬ್, ಕುರ್ಕಾಲು ಗ್ರಾ. ಪಂ. ಸದಸ್ಯರಾದ ಸುದರ್ಶನ್ ರಾವ್, ಕಟಪಾಡಿ ಗ್ರಾ.ಪಂ ಸದಸ್ಯರಾದ ಶಾಲಿನಿ ಚಂದ್ರ ಪೂಜಾರಿ, ಪ್ರಭಾಕರ ಆಚಾರ್ಯ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ದಿನೇಶ್ ಕುಂಜಾರುಗಿರಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾದ ಕವನ್ ಪೂಜಾರಿ ಮತ್ತು ಸದಸ್ಯರು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಗೌರವ ಸಲಹೆಗಾರರಾದ ಭಾಸ್ಕರ ಸನಿಲ್ ರೊನಾಲ್ಡ್ ಸೋನ್ಸ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಪರವಾಗಿ ದಾನಿಗಳಾದ ಫಿಲೋಮಿನಾ ಆಳ್ವ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾದ ಭುವನೇಶ್ ಎಲ್ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಸರ್ವರನ್ನು ಸ್ವಾಗತಿಸಿದರು ಚಿದಾನಂದ ಅವರು ಪ್ರಾರ್ಥಿಸಿದರು ಚಂದ್ರ ಪೂಜಾರಿಕಾರ್ಯಕ್ರಮ ನಿರೂಪಿಸಿದರು ದಾನಿಗಳ ಪರವಾಗಿ ಇಗ್ನೇಷಿಯಸ್ ಆಳ್ವ ಅವರು ಧನ್ಯವಾದ ನೀಡಿದರು.