ಪಡುಬಿದ್ರಿ : ಕಾಪು ತಾಲೂಕಿನ ಅದಮಾರಿನ ಲತಾ ಮತ್ತು ಶಂಕರ್ ಪೂಜಾರಿ ದಂಪತಿಗಳ ಗೃಹ ನಿರ್ಮಾಣ ಕಾರ್ಯ ಕಳೆದ ಸುಮಾರು 8 ವರ್ಷಗಳಿಂದ ಅಪೂರ್ಣಗೊಂಡಿದ್ದು, ಈ ಬಗ್ಗೆ ಪಡುಬಿದ್ರಿ ಸಮಾಜಸೇವೆ ಯುವಕರ ತಂಡ ಶ್ರೀ ಭಗವತಿ ಗ್ರೂಫ್ ತನ್ನ ವಿಶೇಷ ಸೇವಾ ಯೋಜನೆಯ ಮುಖಾಂತರವಾಗಿ ವಿವಿಧ ಸಹೃದಯಿ ದಾನಿಗಳು ತುಂಬು ಹೃದಯದ ಸಹಕಾರದಿಂದ ಈ ಗೃಹನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ನೂತನ ಗೃಹವನ್ನು ಕಳಸ ಹಸ್ತಾಂತರಿಸುವ ಮೂಲಕ ಶಂಕರ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ದಾನಿ ಪ್ರೇಮಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಾನಿಗಳಾದ ಪ್ರೇಮಾನಂದ ಶೆಟ್ಟಿ, ಪಡುಬಿದ್ರಿಯ ಮಿಥುನ್.ಆರ್.ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಇನ್ನಾ, ಯುವರಾಜ್ ಕುಲಾಲ್, ದೇವಿಪ್ರಸಾದ್ ಬೆಳ್ಳಿಬೆಟ್ಟು , ಸಂದೇಶ್ ಶೆಟ್ಟಿ ಪಾದೆಬೆಟ್ಟು, ಸಂದೀಪ್, ಪ್ರಭಾಕರ ಕಂಚಿನಡ್ಕ, ಪ್ರಜ್ವಲ್ ಕುಲಾಲ್, ದೀಕ್ಷಿತ್ ಶೆಟ್ಟಿ, ದಿಲೀಪ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.