ಕಾಪು : ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಡುಪಿ ಜಿಲ್ಲೆ ಉಡುಪಿ ಗ್ರಾಮಾಂತರ ಪ್ರಖಂಡ ವತಿಯಿಂದ ಶ್ರೀ ಶ್ರೀ ಶ್ರೀ ಪುಳಿಂದ ಮಹರ್ಷಿಗಳು ತಪಸ್ಸುಗೈದ ಪುಣ್ಯ ಮಣ್ಣು ಕುಂತಳ ನಗರದ ಮೋಕ್ಷಗಿರಿ ಕ್ಷೇತ್ರದಲ್ಲಿ ನೂತನ ಘಟಕ ಉದ್ಘಾಟನೆ ಮತ್ತು ಸಾರ್ವಜನಿಕ ಗೋ ಪೂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಪು ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪರಿವಾರ ಪ್ರಮುಖರಾದ ಸುನಿಲ್ ಕೆ ಆರ್, ಸ್ಥಳೀಯ ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಸಾದ್ ಶೆಟ್ಟಿ ಸ್ಥಳೀಯ ಪಂಚಾಯತ್ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಜ್ವಲ್ ಹೆಗ್ಡೆ, ಆಶಾ, ಪದ್ಮನಾಭ ನಾಯಕ್ ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.