ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನೂತನ ಕಚೇರಿ ಆರಂಭ
Posted On:
06-11-2021 09:31PM
ಅದಮಾರು : ನಲುವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ನಿರಂತರ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿದ್ಯಾರ್ಥಿ ವೇತನ ವಿತರಿಸುತ್ತಾ ಪ್ರಚಾರ ಬಯಸದೇ ಸಮಾಜ ಮುಖಿ ಶಿಕ್ಷಣ ಪ್ರೀತಿಯ ಕಾರ್ಯನಿರ್ವಹಿಸುತ್ತಿದ್ದ ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನ ನೂತನ ಕಾರ್ಯಾಲಯದ ಆರಂಭ ಹಾಗೂ ವಿದ್ಯಾರ್ಥಿ ವೇತನ - ಸಹಾಯಧನ ವಿತರಣಾ ಕಾರ್ಯಕ್ರಮವು 7-11-2021 ರಂದು ಸಂಜೆ ನಾಲ್ಕು ಗಂಟೆಗೆ ಅದಮಾರಿನ ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಲಿದೆ.
ಪ್ರಸ್ತುತ ಅವಧಿಯಲ್ಲಿ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಮೊತ್ತವನ್ನು ವಿತರಿಸಲಾಗುವುದು.
ಕಾಶೀ ಸಂತಾನ ಟ್ರಸ್ಟ್ ನಲ್ವತ್ತು ವರ್ಷಗಳಲ್ಲಿ
ಪ್ರಾಥಮಿಕ,ಪ್ರೌಢ,ಪದವಿಪೂರ್ವ,ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾನುಸಾರ ವಿದ್ಯಾರ್ಥಿ ವೇತನ ವಿತರಿಸುತ್ತಿದೆ. ಸಹಾಯಧನವನ್ನು ಆರೋಗ್ಯ ಹಾಗೂ ಅಗತ್ಯವಿರುವ ಬಡವರಿಗೆ ಕೊಡುತ್ತಿದೆ. ಮುಂದಿನ ವರ್ಷದಿಂದ ಎರಡು ಲಕ್ಷ ರೂಪಾಯಿ ಮೊತ್ತವನ್ಮು ವಿತರಿಸಲಾಗುವುದು.
ಅದಮಾರಿನ ಸರ್ವೋದಯ ಸಮುದಾಯ ಭವನದ ಪಾರ್ಶ್ವದಲ್ಲಿ ಕಾಶೀಸಂತಾನ ಟ್ರಸ್ಟ್ ನ ನೂತನ ಕಚೇರಿ ಇದೆ.
ನಿವೃತ್ತ ಶಿಕ್ಷಕ ವೈ.ಎಂ.ಶ್ರೀಧರ ರಾವ್ ಕಾಶೀ ಸಂತಾನ ಟ್ರಸ್ಟ್ ನ ಸಂಸ್ಥಾಪಕರು. ಟ್ರಸ್ಟ್ ನ ಕಾರ್ಯಗಳನ್ಮು ನಿಷ್ಠೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದವರು, ಇವರು ಉಪಸ್ಥಿತರಿದ್ದು ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಿಸಲಿರುವರು. ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ ,ಪುಣೆ ಉದ್ಯಮಿ ನಾರಾಯಣ ಕೆ.ಶೆಟ್ಟಿ ಹಾಗೂ ಸಮುದಾಯ ಭವನದ ಅಧ್ಯಕ್ಷ ಕೆ.ಎಲ್.ಕುಂಡಂತಾಯ ಅತಿಥಿಗಳಾಗಿರುವರು ಎಂದು ಟ್ರಸ್ಟ್ ನ ಅಧ್ಯಕ್ಷ ವಿಜಯ ಕುಮಾರ ವೈ ಹಾಗೂ ಕಾರ್ಯದರ್ಶಿ ಸುದರ್ಶನ ವೈ.ಎಸ್. ತಿಳಿಸಿದ್ದಾರೆ.