ಕಾಪು : ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ನವೆಂಬರ್ 14 ಭಾನುವಾರ ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ 'ಆರೋಗ್ಯ ಸೇವಾ -2021", ಆರೋಗ್ಯ ಶಿಬಿರ ನಡೆಯಲಿದೆ.
ನಾನಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿರುವ ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಔಷಧಿ ವಿತರಣೆ ಹಾಗೂ ಕಣ್ಣಿನ ಸಮಗ್ರ ಉಚಿತ ತಪಾಸಣೆ ಹಾಗೂ ಸಲಹೆ, ಉಚಿತ ಬ್ಲಡ್ ಶುಗರ್, ಹಿಮೋಗ್ಲೋಬಿನ್ ತಪಾಸಣೆ ಸಹಿತ ನುರಿತ ವೈದ್ಯರಿಂದ ದೈಹಿಕ, ಮಾನಸಿಕ ವ್ಯಾಧಿ ಗಳ ತಪಾಸಣೆ, ಸಲಹೆ, ಔಷಧಿ ವಿತರಣೆ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಡಾ. ಶಿವಾನಂದ ನಾಯಕ್ ಇವರಿಂದ ಮದುಮೇಹ ಜಾಗೃತಿ ಮಾಹಿತಿ, ಮಣಿಪಾಲದ ನೇತ್ರ ಸಂಗಮದ ನೇತ್ರತಜ್ಞೆ ಡಾ. ಲಾವಣ್ಯಾ ರಾವ್ ಅವರಿಂದ ಕಣ್ಣಿನ ತಪಾಸಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.