ನವೆಂಬರ್ 14 : “ ಗ್ರಾಮ ಒನ್” ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ
Posted On:
13-11-2021 08:57AM
ಉಡುಪಿ : ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ “ ಗ್ರಾಮ ಒನ್” ಆರಂಭಿಸಲಾಗಿದೆ. “ಗ್ರಾಮಒನ್” ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಟಾನ ಮಾಡುವ ಸಂಬಂಧ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ತಯಾರಿ ನಡೆಸಿದೆ. ಅದರಂತೆ ಉಡುಪಿ ಜಿಲ್ಲೆಯ ನಗರ ಪ್ರದೇಶ ಹೊರತು ಪಡಿಸಿ ಉಳಿದ ಗ್ರಾಮಗಳಲ್ಲಿ ಪ್ರಾಂಚೈಂಸಿ ಆಧಾರದಲ್ಲಿ ಸೇವಾ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂದು ಯೋಜನೆಯಡಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಈ ಕೇಂದ್ರಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಜಿಲ್ಲೆಗಳ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ “ ಗ್ರಾಮ ಒನ್” ಆರಂಭಿಸಲು ಪ್ರಾಂಚೈಂಸಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತರು ದಿನಾಂಕ: 11/11/2021 ರೊಳಗಾಗಿ ನೋಂದಾಯಿಸಲು ತಿಳಿಸಲಾಗಿತ್ತು, ಪ್ರಸ್ತುತ ನೋಂದಾವಣಿ ದಿನಾಂಕ: 14/11/2021 ರವರೆಗೆ ಮುಂದುವರಿಸಲಾಗಿದ್ದು ಆಸಕ್ತ ಅರ್ಜಿದಾರರು ಇದರ ಸದುಪಯೋಗವನ್ನು ಪಡೆದುಕೋಳ್ಳಬೇಕಾಗಿ ತಿಳಿಸಲಾಗಿದೆ.
ಆಸಕ್ತ ಅರ್ಜಿದಾರರು ಈ ಕೆಳಗಿನ ಲಿಂಕ್‌ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
https://www.karnatakaone.gov.in/Public/GramOneFranchiseeTerms ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಸಮಾಲೋಚಕರಾದ ನನೀಶ್ ಕುಮಾರ್, ಮೊಬೈಲ್ ಸಂಖ್ಯೆ: 8105467854 ಇವರನ್ನು ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರು ತಿಳಿಸಿದ್ದಾರೆ.