ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜಾನುವಾರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ರಕ್ತ ವರ್ಗೀಕರಣ ಶಿಬಿರ ಮತ್ತು ಪೌಷ್ಟಿಕತೆಯ ಮಾಹಿತಿ ಕಾರ್ಯಗಾರ

Posted On: 13-11-2021 03:21PM

ಕುಂದಾಪುರ : ರೋಟರಿ ಕ್ಲಬ್ ಸೈಬ್ರಕಟ್ಟೆ ಮತ್ತು ಇಂಟರ್ಯಾಕ್ಟ್ ಕ್ಲಬ್ ಜಾನುವಾರುಕಟ್ಟೆ ಹಾಗೂ ಶಿವಾನಿ ಡೈಗ್ನೋಸ್ಟಿಕ್ ಮತ್ತು ರೀಸರ್ಚ್ ಸೆಂಟರ್ ಉಡುಪಿ ,ನವ್ಯ ಚೇತನ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜಾನುವಾರುಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಉಚಿತ ರಕ್ತ ವರ್ಗೀಕರಣ ಶಿಬಿರ ಮತ್ತು ಪೌಷ್ಟಿಕತೆಯ ಮಾಹಿತಿ ಕಾರ್ಯಗಾರ ನಡೆಸಲಾಯಿತು.

ಕಾರ್ಯಕ್ರಮವನ್ನು ಸರಕಾರಿ ಆಯುರ್ವೇದ ಆಸ್ಪತ್ರೆ ಗುಲ್ವಾಡಿಯ ವ್ಯೆದ್ಯಾಧಿಕಾರಿ ಡಾ.ಪ್ರದೀಪ್ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ತನ್ನ ರಕ್ತದ ಗುಂಪಿನ ಬಗ್ಗೆ ಮಾಹಿತಿ ಗೊತ್ತಿರಬೇಕು,ಇದರಿಂದ ತುರ್ತುಪರಿಸ್ಥಿತಿಯಲ್ಲಿ ರಕ್ತ ನೀಡಲು ತುಂಬಾ ಉಪಯುಕ್ತವಾಗುತ್ತದೆ. ಪೌಷ್ಟಿಕ ಆಹಾರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಅಧಿಕವಾಗಿರಲು ಸಹಾಯಕ. ಬಹಳ ಉಪಯುಕ್ತ ಕಾರ್ಯಕ್ರಮ ಎಂದು ಹೇಳಿದರು.

ಇನ್ನೋರ್ವ ಅತಿಥಿ ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ.ಶಿವಾನಂದ್ ನಾಯಕ್ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು. ಈಗೀಗ ನಮ್ಮ ದೇಶದ ಯೋಗ, ವ್ಯಾಯಾಮ ಇಂಥವುಗಳನ್ನು ವಿದೇಶದವರು ಹೆಚ್ಚೆಚ್ಚು ಪಾಲಿಸುತ್ತಿದ್ದು ನಾವು ಮಾತ್ರ ಪಾಶ್ಚಾತ್ಯ ಸಂಸ್ಕ್ರತಿ, ಆಹಾರ ಕ್ರಮಕ್ಕೆ ಮಾರು ಹೋಗಿದ್ದಲ್ಲದೆ ರೆಡಿಮೇಡ್ ಮತ್ತು ಜಂಕ್ ಫುಡ್ ಸೇವಿಸುವ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದು, ಇದರಿಂದ ಬಹಳ ಚಿಕ್ಕಪ್ರಾಯಯದಲ್ಲಿಯೇ ಬೊಜ್ಜು ಬೆಳೆದು ಸಕ್ಕರೆ ಕಾಯಿಲೆ, ಬಿ ಪಿ ಹೀಗೆ ಇನ್ನೂ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ದುರದೃಷ್ಟಕರ ನಾವು ಹೆಚ್ಚೆಚ್ಚು ಪೌಷ್ಟಿಕ ಆಹಾರ ಸೇವನೆ ದಿನನಿತ್ಯ ವ್ಯಾಯಾಮ ಯೋಗ ಮಾಡುವುದರ ಮೂಲಕ ಹೆಚ್ಚು ಆರೋಗ್ಯವಾಗಿರಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ರೋಟರಿ ಸೈಬ್ರಕಟ್ಟೆಯ ಅಧ್ಯಕ್ಷ ಯು.ಪ್ರಸಾದ್ ಭಟ್ ವಹಿಸಿದ್ದರು , ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ನಾಯಕ್, ಇಂಟರ್ಯಾಕ್ಟ್ ಅಧ್ಯಕ್ಷ ಪ್ರಜ್ವಲ್, ರೋಟರಿ ಕಾರ್ಯದರ್ಶಿ ಅಣ್ಣಯ್ಯದಾಸ್, ಇಂಟರ್ಯಾಕ್ಟ್ ಕೋ ಆರ್ಡಿನೇಟರ್ ಕಿರಣ್ ಕಾಜ್ರಲ್ಲಿ, ಟೀಚರ್ಸ್ ಕೋ ಆರ್ಡಿನೇಟರ್ ಶಿವಪ್ಪ , ರೋಟರಿ ನಿಯೋಜಿತ ಕಾರ್ಯದರ್ಶಿ ನೀಲಕಂಠ ರಾವ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲಾ ವಿದ್ಯಾರ್ಥಿಗಳ ರಕ್ತ ವರ್ಗೀಕರಣದ ಪರೀಕ್ಷೆ ನಡೆಸಲಾಯಿತು.