ಕಟಪಾಡಿ : ಜೀರ್ಣೋದ್ಧಾರಗೊಳ್ಳಲಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿ ಮುಂಬಯಿ ಉಪಸಮಿತಿಯ ರಚನೆ
Posted On:
18-11-2021 04:20PM
ಕಟಪಾಡಿ : ಸುಮಾರು 500 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯನ್ನು ಪುನರುತ್ಥಾನಗೊಳಿಸಲು ನಿರ್ಧರಿಸಲಾಗಿದ್ದು. ಸುಮಾರು ಅಂದಾಜು 3.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಮುಂಬಯಿ ಉಪಸಮಿತಿಯನ್ನು ಅ.10ರಂದು ಬಿಲ್ಲವ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಚಿಸಲಾಗಿದೆ.
ನೆರೂಲ್ ಶನೀಶ್ವರ ದೇವಸ್ಥಾನದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ಗೌರವ ಅಧ್ಯಕ್ಷರಾಗಿದ್ದು, ಗೋಪಾಲ ಆರ್. ಕಾಂಚನ್ ಅಧ್ಯಕ್ಷರಾಗಿದ್ದಾರೆ. ಸದಾನಂದ ಕರ್ಕೇರ ಮತ್ತು ವೀರಮಣಿ ಅಮೀನ್ ಉಪಾಧ್ಯಕ್ಷರುಗಳಾಗಿದ್ದು, ಸತೀಶ್ ಎಸ್. ಅಮಿನ್
ಕಾರ್ಯದರ್ಶಿಯಾಗಿ ಮತ್ತು ರಮೇಶ್ ಕರ್ಕೇರ ಹಾಗೂ ಜ್ಯೋತಿ ಆರ್. ಸುವರ್ಣ ಜತೆ ಕಾರದರ್ಶಿಗಳಾಗಿದ್ದಾರೆ. ಕೋಶಾಧಿಕಾರಿಯಾಗಿ ಯಾದವ ಪಿ. ಕೋಟ್ಯಾನ್ ಮತ್ತು ಜತೆ ಕೋಶಾಧಿಕಾರಿಯಾಗಿ ಸುಧಾಕರ ಅಂಚನ್ ಅವರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರುಗಳಾಗಿ ಚಂದ್ರಶೇಖರ ಪೂಜಾರಿ, ಸುರೇಶ್ ಎಸ್. ಅಮೀನ್, ಯಶವಂತ ಪೂಜಾರಿ, ಶಿವಾನಂದ ಬಂಗೇರ, ಶಿವ ಸನಿಲ್, ಸುರೇಂದ್ರ ಶೆಟ್ಟಿ, ಆನಂದ ಸಾಲಿಯಾನ್ ಮತ್ತು ಭಾಸ್ಕರ್ ಪೂಜಾರಿ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ರಂಗ ಕೆ. ಪಾಲನ್, ಬಾಲಕೃಷ್ಣ ಅಂಚನ್, ಟಿ.ಎಂ. ಕೋಟ್ಯಾನ್, ಯೋಗೇಂದ್ರ ಪೂಜಾರಿ ಮತ್ತು ಶ್ರೀಮಂತಿ ಎಸ್. ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಏಣಗುಡ್ಡೆಯ ಕಾರಣಿಕ ಕ್ಷೇತ್ರವಾದ ಶ್ರೀ ಬ್ರಹ್ಮ ಬೈದೇರುಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಬಯಿಯ ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸುವಂತೆ ಉಪ ಸಮಿತಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಧ್ಯಕ್ಷ ಗೋಪಾಲ ಕಾಂಚನ್ (98203 16284), ಕಾರ್ಯದರ್ಶಿ ಸತೀಶ್ ಅಮೀನ್ (9892119275) ಮತ್ತು ಕೋಶಾಧಿಕಾರಿ ಯಾದವ ಕೋಟ್ಯಾನ್ (9821326931) ಇವರನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.